ಲಾಯಿಲ: ದ.ಕ.ಜಿ.ಪಂ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

0

ಲಾಯಿಲ: ಲಾಯಿಲ ಪಡ್ಲಾಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಜೂ.26ರಂದು ಉಚಿತ ಬರೆಯುವ ಪುಸ್ತಕ ವಿತರಣೆ ನಡೆಯಿತು.ಕಾರ್ಯಕ್ರಮದಲ್ಲಿ ಉಚಿತವಾಗಿ ಪುಸ್ತಕ ನೀಡಿದ ದಾನಿಗಳಾದ ಉದ್ಯಮಿ ಲಾಯಿಲ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸದಾನಂದ ಶೆಟ್ಟಿ ಹಾಗೂ ಗುತ್ತಿಗೆದಾರರಾದ ಜಗನ್ನಾಥ ಶೆಟ್ಟಿ ಕರ್ನೋಡಿ ಭಾಗವಹಿಸಿ ಮಕ್ಕಳಿಗೆ ಪುಸ್ತಕ ವಿತರಿಸಿ ಶುಭ ಹಾರೈಸಿದರು.

ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಮಾತನಾಡಿ ನಮ್ಮ ಶಾಲೆಯ ಮಕ್ಕಳೂ ಖಾಸಗಿ ಶಾಲೆಯ ಮಕ್ಕಳಂತೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಕಲ್ಪನೆಯಲ್ಲಿ ಕಳೆದ ಎರಡು ವರ್ಷಗಳಿಂದ ಉತ್ತಮ ಗುಣಮಟ್ಟದ ಬರೆಯುವ ಪುಸ್ತಕಗಳನ್ನು ದಾನಿಗಳ ಮೂಲಕ ನೀಡಲಾಗುತ್ತಿದೆ.

ಇದಕ್ಕೆ ಸ್ಪಂದಿಸಿದ ಸದಾನಂದ ಶೆಟ್ಟಿ ಹಾಗೂ ಜಗನ್ನಾಥ ಶೆಟ್ಟಿಯವರಿಗೆ ಅದೇ ರೀತಿ ಪುಸ್ತಕ ಪಡೆದ ಮಕ್ಕಳು ಮುಂದೆ ಒಳ್ಳೆಯ ವಿದ್ಯಾಭ್ಯಾಸ ಪಡೆದು ಶಾಲೆ ಹಾಗೂ ಊರಿಗೆ ಉತ್ತಮ ಹೆಸರನ್ನು ತಂದುಕೊಡುವುದಲ್ಲದೇ ಉದ್ಯೋಗ ಸಿಕ್ಕಿದ ನಂತರ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ಚಾಚಬೇಕು ಈ ಮೂಲಕ ಪುಸ್ತಕ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ದಿವಾಕರ್ ಕುರುವ, ಸದಸ್ಯರುಗಳಾದ ಶೋಭಾ ಪಡ್ಲಾಡಿ, ಬೇಬಿ ಪಡ್ಲಾಡಿ, ಅಧ್ಯಾಪಕ ವೃಂದವರು ಉಪಸ್ಥಿತರಿದ್ದರು.ಪ್ರಭಾರ ಮುಖ್ಯ ಶಿಕ್ಷಕ ಯೋಗೀಶ್ ಸ್ವಾಗತಿಸಿ ಸಹ ಶಿಕ್ಷಕ ಮಧು ವಂದಿಸಿದರು.

p>

LEAVE A REPLY

Please enter your comment!
Please enter your name here