ಬಂದಾರು: ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿಯಲ್ಲಿ ಯಕ್ಷ ದ್ರುವ ಪಟ್ಲ ಪೌಂಡೇಶನ್ ಮಂಗಳೂರು, ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆಯನ್ನು ಯಕ್ಷಗಾನದ ಹಿರಿಯ ಸಂಘಟಕ, ಮುತ್ಸದ್ದಿ ಬಿ.ಭುಜಬಲಿ ಧರ್ಮಸ್ಥಳ ನೆರವೇರಿಸಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕ ವಿವೇಕಾನಂದ ಗೌಡ ವಹಿಸಿದ್ದರು.ಪಟ್ಲ ಪೌಂಡೇಶನ್ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಭಾಗವಹಿಸಿ, ವಿದ್ಯಾರ್ಥಿಗಳು ಈ ಅಮೂಲ್ಯ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪಟ್ಲ ಪೌಂಡೇಶನ್ ಸಂಚಾಲಕ ಕಿರಣ್ ಶೆಟ್ಟಿ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಮಹಾಬಲ ಗೌಡ , ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಆದಪ್ಪ ಗೌಡ, ಯಕ್ಷಗಾನ ನಾಟ್ಯ ಗುರು ದೇವಿ ಪ್ರಸಾದ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕ ವಿಜಯ ಕುಮಾರ್ ಎಂ. ಸ್ವಾಗತಿಸಿ, ಶಿಕ್ಷಕ ಮಹೇಶ್ ವಂದಿಸಿದರು.
ಶಿಕ್ಷಕಿಯರಾದ ಹೇಮಲತಾ, ಮಮತಾ ಸಹಕರಿಸಿದರು.ಶಿಕ್ಷಕಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.