ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪ್ರಗತಿ ಬಂಧು ನ್ಯಾಯತರ್ಪು ಸ್ವಸಹಾಯ ಸಂಘಗಳ ತ್ರೈಮಾಸಿಕ ಸಭೆಯು ಜೂ.23ರಂದು ನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಳಿಯ, ನ್ಯಾಯತರ್ಪು ಗ್ರಾಮದ ಮೇಲ್ವಿಚಾರಕ ಹರೀಶ್ ಗೌಡ ಮಾತನಾಡುತ್ತಾ ಸಂಘದ ಮೂಲಕ ಪಡೆದ ಸಾಲದ ಹಣವನ್ನು ಕುಟುಂಬದ ಉದ್ದೇಶಿತ ಕೆಲಸಕ್ಕೆ ವಿನಿಯೋಗಿಸಬೇಕು.ಅಗ ಮಾತ್ರ ಸಾಲ ಮರು ಪಾವತಿಸಲು ಸುಲಭ ಸಾಧ್ಯವಾಗುತ್ತದೆ. ಸಂಘದ ಸದಸ್ಯರ ಕುಟುಂಬಕ್ಕೆ ಸಂಪೂರ್ಣ ಸುರಕ್ಷ ವಿಮೆ ಭದ್ರತೆಯಿದೆ.ಆರೋಗ್ಯ ತಪಾಸಣೆ ಶಿಬಿರ, ಕೆಸರ್ಡ್ ಒಂಜಿ ದಿನ ಹಾಗೂ ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು, ಯಾವುದೇ ರೀತಿಯ ದುಶ್ಚಟಗಳಿಗೆ ಕುಟುಂಬದ ಸದಸ್ಯರು ಬಲಿಯಾಗಬಾರದು. ನೆಮ್ಮದಿಯ ಜೀವನ ನಡೆಸಬೇಕು ಎಂದು ಹೇಳಿದರು.ನ್ಯಾಯತರ್ಪು ಒಕ್ಕೂಟದ ಅಧ್ಯಕ್ಷ ಜನಾರ್ಧನ ಗೌಡ ಕೆ, ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ನಿಯೋಜಿತ ಅಧ್ಯಕ್ಷ ಸಿದ್ದಪ್ಪ ಹೆಚ್, ಸಂಧ್ಯಾ, ವಿಜಯ, ಶಶಿಕಲಾ, ಸೇವಾ ಪ್ರತಿನಿಧಿ ಸೌಮ್ಯ ವೇದಿಯಲ್ಲಿ ಉಪಸ್ಥಿತರಿದ್ದರು.ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಸಂಧ್ಯಾ ಒಕ್ಕೂಟದ ವರದಿ ಮಂಡಿಸಿದರು. ಮೀನಾಕ್ಷಿ ಸ್ವಾಗತಿಸಿದರು.