ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ವತಿಯಿಂದ ವನಮಹೋತ್ಸವ ಆಚರಣೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ತರಬೇತಿ

0

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ಇದರ ಮಾರ್ಗದರ್ಶನದಲ್ಲಿ ಅರುಣೋದಯ ಮಹಾಸಂಘ ಇದರ ನೇತೃತ್ವದಲ್ಲಿ ಜೂ.22ರಂದು ವನಮಹೋತ್ಸವ ಆಚರಣೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ತರಬೇತಿ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಮಾರಿಯಂಬಿಕ ಶಾಲೆ ಬಂಗಾಡಿಯಲ್ಲಿ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ವಂ.ಫಾ.ಜೋಸೆಫ್ ಚೀರನ್ ರವರು ಗಿಡಗಳನ್ನು ನೆಟ್ಟು ಪೋಷಿಸಿಸುವ ಮೂಲಕ ಪರಿಸರವನ್ನು ಸಂರಕ್ಷಿಸುವ ಬಗ್ಗೆ ತರಬೇತಿ ನೀಡಿದರು.

ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾರವರು ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ವಹಿಸಿ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಪಾತ್ರದ ಕುರಿತು ಮಾತನಾಡಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂ.ಫಾ.ಬಿನೋಯಿ.ಎ.ಜೆ. ರವರು ಕಾರ್ಯಕ್ರಮದ ಗುರಿ ಉದ್ದೇಶ ಹಾಗೂ ಬರುವ ತಲೆಮಾರಿಗೋಸ್ಕರ ಪರಿಸರ ಸಂರಕ್ಷಣೆಯ ಅಗತ್ಯತೆ ಕುರಿತು ಪ್ರಾಸ್ತಾವಿಕ ನುಡಿಯನ್ನಾಡಿದರು. ಮಾನನಿ ರಾಜ್ಯ ಒಕ್ಕೂಟ ಹಾಗೂ ಸ್ನೇಹ ಜ್ಯೋತಿ ತಾಲೂಕು ಒಕ್ಕೂಟ ಅಧ್ಯಕ್ಷೆ ಮಂಜುಳಾ ಜಾನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅರುಣೋದಯ ಮಹಸಂಘ ಅಧ್ಯಕ್ಷೆ ಏಲಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸ್ವಾಗತವನ್ನು ಕೋರಿದರು. ಡಿ.ಕೆ.ಆರ್‌.ಡಿ.ಎಸ್ ಸಂಸ್ಥೆಯ ಕಾರ್ಯಕರ್ತ ಮಾರ್ಕ್ ಡಿ’ಸೋಜ ಕಾರ್ಯಕ್ರಮವನ್ನು ನಿರೂಪಿಸಿ, ಸರ್ವರಿಗೂ ಧನ್ಯವಾದವನ್ನೂ ನೀಡಿದರು.ಸಭಾ ಕಾರ್ಯಕ್ರಮದ ನಂತರ ಶಾಲಾ ವಠಾರದಲ್ಲಿ ಸರ್ವ ಸದಸ್ಯರ ಸಹಕಾರದೊಂದಿಗೆ ಗಿಡವನ್ನು ನೀಡಲಾಯಿತು.

p>

LEAVE A REPLY

Please enter your comment!
Please enter your name here