ಉಜಿರೆಯಲ್ಲಿ ಮರಬಿದ್ದು ವಾಹನಗಳು ಜಖಂ, ಓರ್ವ ಗಂಭೀರ- ಅರಣ್ಯ, ಹೆದ್ದಾರಿ ಇಲಾಖೆಯ ವಿರುದ್ಧ ಪ್ರತಿಭಟನೆ- ಜಖಂಗೊಂಡ ಆಟೋ ರಸ್ತೆಯಲ್ಲಿಟ್ಟು ಧರಣಿ

0

ಉಜಿರೆ: ಹೆದ್ದಾರಿ ಇಲಾಖೆಯ ನಿರ್ಲಕ್ಷವೋ, ಅರಣ್ಯ ಇಲಾಖೆಯ ಬೇಜವಬ್ದಾರಿಯೋ ಗೊತ್ತಿಲ್ಲ. ಆದರೆ ಉಜಿರೆಯ ದುರ್ಗಾ ಟೆಕ್ಸ್ ಟೈಲ್ಸ್ ಬಳಿ ಏಕಾಏಕಿ ಧರೆಗುರುಳಿದ ದೂಪದ ಮರದಿಂದಾಗಿ ಆಟೋ ಜಖಂಗೊಂಡಿದ್ದು ಆಟೋ ಚಾಲಕ ರತ್ನಾಕರ ಗಂಭೀರ ಗಾಯಗೊಂಡಿದ್ದಾರೆ. ಇದರ ಜೊತೆ ಮತ್ತೆರಡು ವಾಹನಗಳು ಜಖಂಗೊಂಡಿವೆ.

ಇಲ್ಲಿ ಗಾಯಗೊಂಡವರಿಗೆ ಪರಿಹಾರ ನೀಡೋದು ಯಾರು,‌ಈ ಮರ ಬಿದ್ದ ಪ್ರಕರಣಕ್ಕೆ ಹೊಣೆಯಾರು ಎಂದು ಪ್ರಶ್ನಿಸಿ ಸಾರ್ವಜನಿಕರು ಪ್ರತಿಭಟನೆಗಿಳಿದಿದ್ದಾರೆ. ಜಖಂಗೊಂಡ ಆಟೋವನ್ನು ರಸ್ತೆಯಲ್ಲಿ ನಿಲ್ಲಿಸಿರುವ ಸಾರ್ವಜನಿಕರು ರಸ್ತೆಯಲ್ಲೇ ಕುಳಿತು ಧರಣಿ ಆರಂಭಿಸಿದ್ದಾರೆ.ಮಳೆಯನ್ನು ಲೆಕ್ಕಿಸದೆ ಆಟೋ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈಗಾಗಲೇ ಉಜಿರೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು ಮೂರು ಕಿಲೋಮೀಟರ್ ನಷ್ಟು ದೂರ ಟ್ರಾಫಿಕ್ ಜಾಮ್ ಆಗಿದೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು,ಅರಣ್ಯಾಧಿಕಾರಿ ಮೋಹನ್ ಭೇಟಿ ನೀಡಿದ್ದಾರೆ.

p>

LEAVE A REPLY

Please enter your comment!
Please enter your name here