ಉಜಿರೆ: ರಸ್ತೆಗೆ ಬಿದ್ದ ಬೃಹತ್ ಆಕಾರದ ಮರ- ಹಲವು ವಾಹನಗಳು ಜಖಂ

0

ಉಜಿರೆ: ಬೆಳ್ತಂಗಡಿಯಿಂದ-ಉಜಿರೆ ಕಡೆಗೆ ಹಾದು ಹೋಗುವ ರಸ್ತೆಯ ದುರ್ಗಾ ಲಾಡ್ಜ್ ನ ಹತ್ತಿರ ಇರುವ ಬೃಹತ್ ಆಕಾರದ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದ ಕಾರಣ ರಿಕ್ಷಾವು ಸಂಪೂರ್ಣ ಜಖಂ ಗೊಂಡಿದೆ. ಹಾಗೂ ಇತರ ವಾಹನಗಳಿಗೆ ಹಾನಿ ಉಂಟಾಗಿದೆ.

ರಿಕ್ಷಾ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಉಜಿರೆ ಗ್ರಾ.ಪಂ ಸಿಬ್ಬಂದಿಗಳು, ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟ್ರಾಫಿಕ್ ಜಾಮ್ ಉಂಟಾಗಿ, ರಸ್ತೆ ಸಂಚಾರದಲ್ಲಿ ಅಡೆಚಣೆ ಉಂಟಾದ ಘಟನೆ ನಡೆದಿದೆ.

ಮರವನ್ನು ತೆರವುಗೊಳಿಸಲು ಸಾರ್ವಜನಿಕರು ಹರಸಾಹಸ ಪಟ್ಟಿದ್ದಾರೆ.

LEAVE A REPLY

Please enter your comment!
Please enter your name here