ಬೆಳಾಲು: ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಅಂಗವಾಗಿ ರಚಿಸಲ್ಪಡುವ ವಿದ್ಯಾರ್ಥಿ ಸರಕಾರದ ಆ ನಂತರದ ನಡೆ ಮತ್ತು ಕ್ರಿಯಾಶೀಲತೆಯೇನು ಎಂಬುದು ಮಹತ್ವದ ವಿಷಯ. ಈ ಮೂಲಕ ವಿದ್ಯಾರ್ಥಿಗಳು ಜವಾಬ್ದಾರಿಯ ಅರಿವನ್ನು ಪಡೆಯುವಂತಾಗಿ ಜವಾಬ್ದಾರಿಯತ ಪ್ರಜೆಯಾಗಿ ರೃಪುಗೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಇತರ ಚಟುವಟಿಕೆಗಳ ಜೊತೆಗೆ ಗುರಿ ಇಟ್ಟುಕೊಂಡು ಅಧ್ಯಯನ ಮಾಡಬೇಕು ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ. ಜಿ. ಲಕ್ಷ್ಮಣ ಶೆಟ್ಟಿ ತಿಳಿಸಿದರು.
ಇವರು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರ ಮತ್ತು ವಿವಿಧ ಸಂಘಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿ ಸರಕಾರದ ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿ ನಾಯಕ ಲೋಕೇಶ್ ಪೂಜಾರಿ ಓಡಲರವರು ತನ್ನ ಸರಕಾರದ ಕಾರ್ಯಯೋಜನೆಯನ್ನು ಮಂಡಿಸಿದರು.
ಅತಿಥಿಗಳಾದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶೇಖರ ಗೌಡ ಕೊಲ್ಲಿಮಾರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ ಕನಿಕ್ಕಿಲ ಶುಭಹಾರೈಸಿದರು.
ಶಿಕ್ಷಕ ಸಿಬ್ಬಂದಿಗಳೆಲ್ಲರು ಉಪಸ್ಥಿತರಿದ್ದರು.ಮಾರ್ಗದರ್ಶಕ ಶಿಕ್ಷಕಿ ರಾಜಶ್ರೀ ಸ್ವಾಗತಿಸಿ, ಕು. ಸಮೀಕ್ಷಾ ವಂದಿಸಿದರು, ವಿದ್ಯಾರ್ಥಿ ಸರಕಾರದ ಸಭಾಪತಿ ಹೇಮಂತ್ ರವರು ಕಾರ್ಯಕ್ರಮ ನಿರೂಪಿಸಿದರು. ಸಭೆಯ ನಂತರ ವಿದ್ಯಾರ್ಥಿ ಸರ್ಕಾರದ ಮೊದಲ ಅಧಿವೇಶನ ಜರಗಿತು.