ಬೆಳ್ತಂಗಡಿ ಮಹಿಳಾ ಜೇಸಿ ವಿಭಾಗದಿಂದ ರಾಮನಗರ ಅಂಗನವಾಡಿಗೆ ಧ್ವನಿವರ್ಧಕ ಕೊಡುಗೆ

0

ಬಳಂಜ: ನಾಲ್ಕೂರು ಗ್ರಾಮದ ರಾಮನಗರ ಅಂಗನವಾಡಿ ಕೇಂದ್ರದಲ್ಲಿ ಚಿಣ್ಣರ ಡ್ಯಾನ್ಸ್ ಹಾಗೂ ಇತರ ಚಟುವಟಿಕೆಗಳಿಗೆ ಬೇಕಾದ ಧ್ವನಿವರ್ಧಕವನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಮಹಿಳಾ ಜೆಸಿ ವಿಭಾಗದಿಂದ ಕೊಡುಗೆಯಾಗಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಜೆಸಿಐಯ ಅಧ್ಯಕ್ಷ ರಂಜಿತ್ ಎಚ್ ಡಿ, ಮಹಿಳಾ ವಿಭಾಗದ ಶ್ರುತಿ ರಂಜಿತ್, ಅಂಗನವಾಡಿ ಕಾರ್ಯಕರ್ತೆ ಗೀತಾ, ಸಹಾಯಕಿ ನಳಿನಿ, ಆಯಾನ್ಸ್ ಸುಧಾಮ ಹಾಗೂ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here