ಕಲ್ಮಂಜ: ಸರಕಾರಿ ಪ್ರೌಢ ಶಾಲೆಯಲ್ಲಿ ಜೂ. 21ರಂದು ರಂದು ವಿಶ್ವಯೋಗ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಕೃಷ್ಣಪ್ರಸಾದ್ ಅರ್ಬಿ ಮಾತನಾಡಿ ಸಣ್ಣ ಪ್ರಾಯದಲ್ಲೇ ಯೋಗ ಮಾಡುವ ಮೂಲಕ ರೋಗ ನಿವಾರಣೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಪಂಚಾಯತ್ ಅಧ್ಯಕ್ಷೆ ವಿಮಲಾ ವಹಿಸಿದ್ದರು. ಮುಖ್ಯ ಶಿಕ್ಷಕಿ ಪೂರ್ಣಿಮಾ ಪ್ರಾಸ್ತಾವಿಸಿ ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಪೂರ್ಣಿಮಾ, ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟಿ, ನ್ಯಾಚುರೋಪತಿ ಮತ್ತು ಯೋಗ ಸೈನ್ಸ್ ವಿದ್ಯಾರ್ಥಿನಿ ಕು.ಸಾನಿಧ್ಯ ಭಾಗವಹಿಸಿದ್ದರು.
ಹಿಂದಿ ಶಿಕ್ಷಕ ಸುಧೀಂದ್ರ ನಿರೂಪಿಸಿ ಸಮಾಜ ಶಿಕ್ಷಕಿ ಕು.ನೃತ್ಯಶ್ರೀ ವಂದಿಸಿದರು ಶಿಕ್ಷಕಿಯರಾದ ಮಾಲಿನಿ ಹೆಗಡೆ ಸವಿತಾ ಹೇಮಲತಾ ಹಾಗೂ ಪ್ರೇಮಾ ಎಚ್ ವಿ. ಸಹಕರಿಸಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ವತಿಯಿಂದ ಶಾಲೆಗೆ ಹತ್ತು ಯೋಗಾ ಮ್ಯಾಟ್ ಗಳನ್ನು ನೀಡಲಾಯಾತು.
p>