ಪುಂಜಾಲಕಟ್ಟೆ: ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ರಝಾನಗರದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಶಾಲಾ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳು ವಿಶ್ವ ಯೋಗ ದಿನದ ಪ್ರತಿಜ್ಞೆ ಮಾಡುವುದರ ಮೂಲಕ ಈ ದಿನದ ಮಹತ್ವವನ್ನು ಅರಿತು ಕೊಂಡರು.
ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ.ಬಿ ಉದ್ಘಾಟಿಸಿದರು.
ಶಿಕ್ಷಕಿಯರಾದ ಶೇಖ್ ಸಾದಿಯ ಮತ್ತು ಚಂದ್ರಾವತಿ ಮಾರ್ಗದರ್ಶನ ನೀಡಿದರು.
ಯೋಗದ ಮಹತ್ವವನ್ನು ವಿವರಿಸಿದ ಶೇಖ್ ಜಲಾಲುದ್ದೀನ್ ಮಾತನಾಡಿ ಯೋಗಾಸನಗಳು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರೀಕರಿಸುದಲ್ಲದೆ ಇದೊಂದು ಆರೋಗ್ಯಕರ ಜೀವನ ಕಲೆ, ಕಲಿತ ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವಂತೆ ತಿಳಿಸಿದರು.
ವಿಮಾಲರವರು ಮಾತಾಡಿ ಉತ್ತರ ಗೋಳಾರ್ಧದ ವರ್ಷದ ಅತೀ ದೀರ್ಘವಾದ ದಿನ ಬೇಸಿಗೆ ಆಯನ ಸಂಕ್ರಾಂತಿ ದಿನ ಅಂದರೆ ಅತ್ಯಂತ ಹಗಳುಳ್ಳ ದಿನವಾದ ಕಾರಣ ಈ ದಿನ ಯೋಗಕ್ಕೆ ಸೂಕ್ತ ದಿನವೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ಮಾತಾಡಿ ಒತ್ತಡ, ಉತ್ತಮ ನಿದ್ರೆ, ಹೃದಯದ ಆರೋಗ್ಯ, ಬೆನ್ನು ನೋವು, ಸಮತೋಲನ, ನಮ್ಯತೆಯನ್ನು ಸುಧಾರಿಸಲು ಯೋಗ ಸಹಕಾರಿ ಎಂದು ತಿಳಿಸಿದರು.
ಯೋಗ ಸಂಕಲ್ಪವನ್ನು ಕಿಶ್ಫಾ ಝಬೀನ್ ಭೊದಿಸಿದರು.
ವಿದ್ಯಾರ್ಥಿಗಳಾದ ಅಫ್ರಾ ರಿಂಷಾ, ಮಶ್ಕೂರ ಹನಾ, ಸ್ಪೂರ್ತಿ, ಪ್ರತೀಕ, ಸ್ಪೂರ್ತಿ ಜಾದರ್, ರಿಷಾನ ಯೋಗ ಮಾಡುವುದರ ಮೂಲಕ ಸಹಪಾಠಿಗಳು ಅನುಸರಿಸುವಂತೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.