ಕುದುರೆಮುಖ ನೇತ್ರಾವತಿ ಪೀಕ್ ಚಾರಣಿಗರಿಗೆ ಸೂಚನೆ

0

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಮತ್ತು ನೇತ್ರಾವತಿ ಪೀಕ್ ಚಾರಣಕ್ಕೆ ಅತೀ ಹೆಚ್ಚಿನ ಚಾರಣಿಗರ ಒತ್ತಡ ಇರುತ್ತದೆ. ಈ ಎರಡೂ ಚಾರಣಗಳಿಗೆ ಚಾರಣ ಕುರಿತು ಅವಕಾಶ ನೀಡಲು ಸಾಗಿಸುವ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿರ್ಧರಿಸಲಾಗಿದ್ದು ಒಂದು ಚಾರಣ ಪಥಕ್ಕೆ ಗರಿಷ್ಠ 300 ಜನರಿಗೆ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ. ಈ ವ್ಯವಸ್ಥೆಗೆ ಅನ್ ಲೈನ್ ತಂತ್ರಾಂಶ www.kudremukhanational park.in ರೂಪಿಸಲಾಗಿದ್ದು ಒಬ್ಬ ವ್ಯಕ್ತಿಯು ಗರಿಷ್ಠ ಮೂರು ಜನರಿಗೆ ಬುಕ್ಕಿಂಗ್ ಮಾಡಬಹುದಾಗಿದೆ. ಎಲ್ಲಾ ಚಾರಣಿಗರು ಆನ್ ಲೈನ್ ಮೂಲಕ ಮಾತ್ರ ಬುಕ್ಕಿಂಗ್ ಮಾಡಬೇಕಾಗಿದ್ದು ಯಾವುದೇ ಆಫ್ ಲೈನ್ ಬುಕ್ಕಿಂಗ್ ಅವಕಾಶ ಇರುವುದಿಲ್ಲ.

ವಾರಾಂತ್ಯವಾದ ಶನಿವಾರ ಮತ್ತು ಭಾನುವಾರಕ್ಕೆ 200 ಜನರಿಗೆ ಅವಕಾಶ ನೀಡಲಾಗುತ್ತದೆ. ವಾರಾಂತ್ಯಕ್ಕೆ ಸ್ಥಳೀಯ ಗ್ರಾಮಸ್ಥರಿಗೆ ಅವಕಾಶ ಲಭಿಸದ ಕಾರಣ ಇವರಿಗೆ ವಿಶೇಷವಾಗಿ ಅವಕಾಶ ನೀಡಲು 50 ಸ್ಥಳೀಯ ಗ್ರಾಮಸ್ಥರಿಗೆ ಪ್ರತ್ಯೇಕ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ರೂಪಿಸಲಾಗಿದ್ದು ಸದ್ರಿಯವರು ವಲಯ ಅರಣ್ಯ ಅಧಿಕಾರಿ ವನ್ಯಜೀವಿ ವಲಯ ಕುದುರೆಮುಖ ಮತ್ತು ಬೆಳ್ತಂಗಡಿ ಇವರನ್ನು ಸಂಪರ್ಕಿಸಿ ಬುಕ್ಕಿಂಗ್ ಲಾಗಿನ್ ಐಡಿ ಪಡೆದು ನೊಂದಾಯಿಸಿಕೊಳ್ಳಬಹುದಾಗಿರುತ್ತದೆ.

50 ಪ್ರವಾಸಿಗರಿಗೆ ತತ್ಕಾಲ್ ರೂಪದಲ್ಲಿ ವಾರಾಂತ್ಯಕ್ಕೆ ಮಾತ್ರ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ. ತತ್ಕಾಲ್ ಬುಕ್ಕಿಂಗ್ ವ್ಯವಸ್ಥೆಯನ್ನು ತಂತ್ರಾಂಶದಲ್ಲಿ ರೂಪಿಸಲಾಗಿದ್ದು ಕೊನೆಕ್ಷಣದಲ್ಲಿ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಕುರಿತು ಪ್ರತಿ ಗುರುವಾರದ ಪೂರ್ವಾಹ್ನ ಆನ್ ಲೈನಿನಲ್ಲಿ ಅವಕಾಶ ನೀಡಲಾಗುವುದು. ಉಳಿದ ದಿನಗಳಿಗೆ 300 ಜನರಿಗೆ ಬುಕ್ಕಿಂಗ್ ಅವಕಾಶ ನೀಡಲಾಗುತ್ತದೆ. ಚಾರಣ ಕುರಿತು ಪ್ರತಿ ತಿಂಗಳು 25ನೇ ತಾರೀಖಿನಂದು ಮುಂದಿನ 30ದಿನಗಳಿಗೆ ಆನ್ ಲೈನ್ ತಂತ್ರಾಂಶದಲ್ಲಿ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ.ಈ ವ್ಯವಸ್ಥೆಯು ಜೂನ್ 25ರಿಂದ ಜಾರಿಗೆ ಬರುತ್ತದೆ.

ಜೂ.30 ಹೋಂ ಸ್ಟೇ ದಾಖಲಾತಿ ಸಲ್ಲಿಕೆಗೆ ಕೊನೆ ದಿನ: ಸ್ಥಳೀಯ ಹೋಂ ಸ್ಟೇ ಮಾಲೀಕರು ವಲಯ ಅರಣ್ಯ ಅಧಿಕಾರಿ ವನ್ಯಜೀವಿ ವಲಯ ಕುದುರೆಮುಖ ಮತ್ತು ಬೆಳ್ತಂಗಡಿ ಇವರಲ್ಲಿ ಹೋಂ ಸ್ಟೇ ಕುರಿತ ದಾಖಲಾತಿಗಳನ್ನು ನೀಡಿ ಕಡ್ಡಾಯವಾಗಿ ಜೂನ್ 30ರ ಒಳಗೆ ನೊಂದಾಯಿಸಿಕೊಳ್ಳಬೇಕಾಗಿರುತ್ತದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆ ತಿಳಿಸಿದೆ.

p>

LEAVE A REPLY

Please enter your comment!
Please enter your name here