


ವೇಣೂರು: ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಾಲೇಜು ಇಲ್ಲಿನ ವಿದ್ಯಾರ್ಥಿ ಸಂಘ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವು ಜೂ.15ರಂದು ನಡೆಯಿತು.ಉದ್ಘಾಟಕರಾಗಿ ಸುನಿಲ್ ಕುಮಾರ್ ಕೆ ಎಸ್ ವೇಣೂರು ಉಪವಲಯ ಅರಣ್ಯಾಧಿಕಾರಿ, ಈ ಕಾರ್ಯಕ್ರಮವನ್ನು ಉದ್ಘಾಟಿಸಿ ನಮ್ಮ ಸುತ್ತಮುತ್ತಲಿನ ಗುಡ್ಡಗಾಡಿನ ಬಗ್ಗೆ ತಿಳಿಸಿದರು.
ಕುಂಭಶ್ರೀ ಶಾಲಾ ಮನೆಗೊಂದು ಗಿಡ ಮಗುವಿಗೊಂದು ಗಿಡ ಅಭಿಯಾನವನ್ನು ಅಭಿನಂದಿಸಿದರು. ಶಾಲಾ ಸಂಸ್ಥಾಪಕ ಗಿರೀಶ್ ಕೆ.ಹೆಚ್ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ಇರಬೇಕು.ತಮ್ಮ ತಮ್ಮ ಕೆಲಸಗಳನ್ನು ಶ್ರದ್ಧೆಯಿಂದ ನಿರ್ವಹಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ನೀಡಿದರು.


ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿತ್ ಕುಲಾಲ್ ಪರಿಸರವನ್ನು ನಾವು ಯಾಕೆ ಪ್ರೀತಿಸಬೇಕು ಅದರ ಬಗ್ಗೆ ಮಕ್ಕಳಿಗೆ ವಿವರವಾಗಿ ತಿಳಿಸಿದರು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯ ಮುಖ್ಯ ಶಿಕ್ಷಕಿ ಮೀನಾ ಕ್ವಾಲೊ ಪರಿಸರ ಉಳಿಸಿ ನಾಡು ಬೆಳೆಸಿ ಹಾಗೆ ಸಮಾಜವನ್ನು ಬೆಳೆಸುವಂತಹ ನಾಯಕರಾಗಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲಾ ನಾಯಕನಾಗಿ ಹತ್ತನೇ ತರಗತಿಯ ಅಜೇಶ್, ಉಪನಾಯಕಿಯಾಗಿ 7ನೇ ತರಗತಿಯ ಚಿನ್ಮಯಿ, ಸ್ಪೀಕರ್ ಆಗಿ 10ನೇ ತರಗತಿಯ ಬಿ ಜೆ ವಿನುತ್ ಉಳಿದಂತೆ 14 ವಿದ್ಯಾರ್ಥಿಗಳು ವಿವಿಧ ಬಗೆಯ ನಾಯಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಉಷಾ ಜಿ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಪ್ರೌಢಶಾಲಾ ವಿಭಾಗದ ಶಿಕ್ಷಕಿ ಗೌತಮಿ ಮತ್ತು ಶಿಕ್ಷಕಿ ಉಷಾ ನಿರೂಪಿಸಿ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಅಕ್ಷತ ಸ್ವಾಗತಿಸಿ, ಕಿರಿಯ ವಿಭಾಗದ ಮುಖ್ಯ ಶಿಕ್ಷಕಿ ಪವಿತ್ರ ಧನ್ಯವಾದ ಸಮರ್ಪಿಸಿದರು.


            






