ಮುಂಡಾಜೆ: ದೇವಾಂಗ ಸಮಾಜ ಘಟಕದ ತ್ರೈಮಾಸಿಕ ಸಭೆ

0

ಮುಂಡಾಜೆ: ದೇವಾಂಗ ಸಮಾಜ ಅಭಿವೃದ್ಧಿಯೊಂದಿಗೆ ಪರಿಸರದ ಕಾಳಜಿ, ಇಲ್ಲಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಬಗ್ಗೆ ತಮ್ಮನ್ನು ತಾವು ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕಾಗಿದೆ ಎಂದು ದೇವಾಂಗ ಸಮಾಜ ಉಜಿರೆ ವಲಯದ ಮಾಜಿ ಅಧ್ಯಕ್ಷ ಭಾಸ್ಕರ ಎಂ.ಡಿ ಹೇಳಿದರು.

ಇವರು ಚಂದ್ಕೂರಿನ ತಮ್ಮ ಮನೆಯಲ್ಲಿ ಇತ್ತೀಚೆಗೆ ನಡೆದ ದೇವಾಂಗ ಸಮಾಜ ಮುಂಡಾಜೆ ಘಟಕದ ತ್ರೈಮಾಸಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಆಷಾಢದಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜನೆ, ವನಮಹೋತ್ಸವ, ದತ್ತಿನಿಧಿ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಯಶಸ್ವಿಗೊಳಿಸುವುದೆಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು.ಸಮಾಜಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಸಹಕರಿಸುತ್ತಿರುವ ವಿನೋದ್, ಸಿಂಗಾಪುರ ಇವರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ರಾಜ್ ಗೋಪಾಲ್ ಸೋಮಂತಡ್ಕ ವಹಿಸಿದ್ದರು.ವೇದಿಕೆಯಲ್ಲಿ ದೇವಾಂಗ ಸಮಾಜ ಉಜಿರೆ ವಲಯದ ಅಧ್ಯಕ್ಷ ರವಿ ನೆಯ್ಯಾಲು, ವಲಯ ಸಂಘಟನಾ ಕಾರ್ಯದರ್ಶಿ ರೋಹಿತ್ ಕಾಶಿ ಬೆಟ್ಟು, ಘಟಕದ ಕಾರ್ಯದರ್ಶಿ ಮಹೇಂದ್ರ, ಕೊಡಂಗೆ, ಕೋಶಾಧಿಕಾರಿ ಗಣೇಶ್ ದೇವಾಂಗ ಮೂಲಾರು ಉಪಸ್ಥಿತರಿದ್ದರು.

ಸೌಮ್ಯ ಪ್ರಭಾ ಮೂಲಾರು ಪ್ರಾರ್ಥಿಸಿದರು, ಮಂಜೇಶ್, ಕೊಡಂಗೆ ಸ್ವಾಗತಿಸಿ ಶಶಿಧರ್ ವಂದಿಸಿದರು. ಸವಿತಾ ಕೇಶವ ದೇವಾಂಗ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here