ಕಳಸ ನದಿಯಲ್ಲಿ ಮುಳುಗಿದ ಯುವಕನ ದೇಹ ಪತ್ತೆ- ತುರ್ತು ಕರೆಗೆ ಸ್ಪಂದಿಸಿದ ಉಜಿರೆ-ಬೆಳಾಲು ಶೌರ್ಯ ಘಟಕದ ಸ್ವಯಂ ಸೇವಕರು

0

ಬೆಳ್ತಂಗಡಿ: ಕಳಸದ ಅಂಬಾ ತೀರ್ಥ ನದಿಯಲ್ಲಿ ಸ್ನಾನಕ್ಕಿಳಿದಿದ್ದ ಮಧ್ಯಪ್ರದೇಶ ಮೂಲದ ಸಾಗರ್ (19 ) ಯುವಕ ನದಿ ನೀರಿನಲ್ಲಿ ಕಣ್ಮರೆಯಾಗಿದ್ದ ವಿಷಯ ತಿಳಿದ ಉಜಿರೆ-ಬೆಳಾಲು ಶೌರ್ಯ ಘಟಕದ ಸ್ವಯಂಸೇವಕರು ಮೆಚ್ಚುಗೆಯ ಕೆಲಸ ಮಾಡಿದ್ದಾರೆ.

ಈಶ್ವರ್ ಮಲ್ಪೆ ಯವರ ಮೂಲಕ ತಮ್ಮ ತಂಡದ ಕ್ಯಾಪ್ಟನ್ ಸಂತೋಷ್ ಅವರಿಗೆ ಬಂದಿದ್ದ ಕರೆಗೆ ಸ್ಪಂದಿಸಿದ ತಂಡ ತಕ್ಷಣ ಮೃತದೇಹ ಶೋಧ ಕಾರ್ಯಕ್ಕೆ ಉಜಿರೆ-ಬೆಳಾಲು ಘಟಕ ಮುಂದಾಯಿತು.

ಘಟಕ ಪ್ರತಿನಿಧಿ ರವೀಂದ್ರ, ಕ್ಯಾಪ್ಟನ್ ಸಂತೋಷ್, ಸಂದೇಶ್, ಸುಧೀರ್ ರವರು ಘಟನಾ ಸ್ಥಳಕ್ಕೆ ಧಾವಿಸಿ ಮೃತದೇಹ ಪತ್ತೆಗಾಗಿ ಬೆಳಗ್ಗಿನಿಂದ ಮಧ್ಯಾಹ್ನ ದವರೆಗೆ ಶ್ರಮಿಸಿ ಕೊನೆಗೆ ಯಶಸ್ವಿಯಾಯಿತು.

ಈ ವೇಳೆ ಗ್ರಾ. ಯೋಜನೆಯ ಕಳಸದ ಯೋಜನಾಧಿಕಾರಿ ಹಾಗೂ ಕಳಸದ ಶೌರ್ಯ ಟೀಮ್ ಪೂರಕ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here