ಬೆಳ್ತಂಗಡಿ: ಗೌಸಿಯಾ ಜಾಮೀಯ ಮಸ್ಜಿದ್ ನಲ್ಲಿ ಬಕ್ರೀದ್ ಆಚರಣೆ

0

ಬೆಳ್ತಂಗಡಿ: ಕೋರ್ಟ್ ರಸ್ತೆ ಗೌಸಿಯಾ ಜಾಮೀಯ ಮಸ್ಜಿದ್ ನಲ್ಲಿ ಖತೀಬ್ ಮೌಲಾನ ಸಯ್ಯದ್ ಗುಲ್ರೆಝ್ ಅಹ್ಮದ್ ರಝ್ವಿ ರವರ ನೇತೃತ್ವದಲ್ಲಿ ಹಾಗೂ ಸಹಾಯಕ ಖತೀಬ್ ಮುಹಮ್ಮದ್ ಸುಲ್ತಾನ್ ರವರ ಉಪಸ್ಥಿತಿಯಲ್ಲಿ ಈದ್ -ಉಲ್ -ಅಝ್ಹ ಸಂದೇಶ, ಈದ್ ನಮಝ್ ಮತ್ತು ಖುತುಬಾ ನಡೆಯಿತು.

ಈ ವೇಳೆ ನಾಡಿನ ಏಕತೆ, ಸಹೋದರತೆಗಾಗಿ ದುವಾ ಪ್ರಾರ್ಥನೆ ಸಲ್ಲಿಸಲಾಯಿತು.ತದನಂತರ ಈದ್ ನ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಮಸ್ಜಿದ್ ಸಮಿತಿ ಅಧ್ಯಕ್ಷ ಮಹಮ್ಮದ್ ರಫಿ, ಗೌರವಾಧ್ಯಕ್ಷ ಲತೀಫ್ ಸಾಹೇಬ್, ಉಪಾಧ್ಯಕ್ಷ ಅಮಿರುದ್ದಿನ್, ಕಾರ್ಯದರ್ಶಿ ನಾಸಿರ್ ಪಾಷ, ಕೋಶಾಧಿಕಾರಿ ಬಶೀರ್ ಅಹ್ಮದ್, ಸದಸ್ಯರಾದ ಮೆಹಬೂಬ್ ಬಿ, ಅಬ್ದುಲ್ ಅಝೀಝ್, ಮುಹಮ್ಮದ್ ಶರೀಫ್, ಫಾರ್ಮನ್, ಮುಹಮ್ಮದ್ ಶಬ್ಬೀರ್, ಮುಹಮ್ಮದ್ ಸಮೀರ್ ಪಪ್ಪು, ಜಮಾಅತ್ ನ ಹಿರಿಯರಾದ ಬಿ.ಎ ರಹೀಮ್, ಬಿ.ಎ ರಶೀದ್, ಬಿ.ಎ ಖಲೀಲ್, ಬಿ.ಎ ರಝಾಕ್, ಇಸ್ಮಾಯಿಲ್ ಕಡೆಮಾರ್, ಶಾಹೀದ್, ಬಶೀರ್ ಮೌಲನ, ಸಯ್ಯದ್ ಗಫ್ಫರ್, ಅಬ್ದುಲ್ ಹಮೀದ್ ಕೆ.ಎಸ್.ಆರ್.ಟಿ.ಸಿ, ಶಬ್ಬೀರ್ ಅಬಕಾರಿ, ಶೇಖ್ ಮಹಮ್ಮದ್ ಲೈಲಾ, ಶೇಖ್ ಬಾಬ್ ಜಾನ್, ಹನೀಫ್ ಮೆಹರಾಜ್, ಮನ್ಸೂರ್ ಲೈಲಾ, ಮದರಸ ವಿದ್ಯಾರ್ಥಿಗಳು ಹಾಗೂ ಇನ್ನು ಹಲವಾರು ಮಂದಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here