ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

0

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ತಿನ ಚುನಾಯಿತ ಪ್ರತಿನಿಧಿಗಳ ಪ್ರಮಾಣ ವಚನ ಕಾರ್ಯಕ್ರಮವನ್ನು ಜೂ.15ರಂದು ಶಾಲಾ ಮುಖ್ಯೋಪಾಧ್ಯಾಯ ಸೀತಾರಾಮ ಗೌಡ ರವರು ನಡೆಸಿಕೊಟ್ಟರು.

ಮುಖ್ಯ ಮಂತ್ರಿಯಾಗಿ ಕಿರಣ್ 7ನೇ, ಉಪ ಮುಖ್ಯಮಂತ್ರಿಯಾಗಿ ಸಾತ್ವಿಕ್ 6ನೇ, ಶಿಕ್ಷಣ ಮಂತ್ರಿಯಾಗಿ ಪ್ರಣಮ್ಯ 7ನೇ, ಉಪ ಶಿಕ್ಷಣ ಮಂತ್ರಿಯಾಗಿ ಜೀವನ್‌ 6ನೇ, ಸಾಂಸ್ಕೃತಿಕ ಮಂತ್ರಿಯಾಗಿ ಅದ್ವಿತಿ 7ನೇ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಹರ್ಷಿತ್ 6ನೇ, ಆರೋಗ್ಯ ಮಂತ್ರಿಯಾಗಿ ಚೇತನ 7ನೇ, ಉಪ ಆರೋಗ್ಯ ಮಂತ್ರಿಯಾಗಿ ಯಕ್ಷಿತಾ 6ನೇ, ಆಹಾರ ಮಂತ್ರಿಯಾಗಿ ಲಿಖಿತ್ ಎಮ್. 7ನೇ, ಉಪ ಆಹಾರ ಮಂತ್ರಿಯಾಗಿ ಪವನ್ 6ನೇ, ಕ್ರೀಡಾ ಮಂತ್ರಿಯಾಗಿ ಕಾರ್ತಿಕ್ 7ನೇ, ಉಪ ಕ್ರೀಡಾ ಮಂತ್ರಿಯಾಗಿ ಗೌತಮ್ 6ನೇ, ರಕ್ಷಣಾ ಮಂತ್ರಿಯಾಗಿ ಸಿಂಚನಾ 7ನೇ, ಉಪ ರಕ್ಷಣಾ ಮಂತ್ರಿಯಾಗಿ ವೀಕ್ಷಿತಾ 6ನೇ, ನೀರಾವರಿ ಮಂತ್ರಿಯಾಗಿ ಪವನ್ 7ನೇ, ಉಪ ನೀರಾವರಿ ಮಂತ್ರಿಯಾಗಿ ಮನ್ವಿತ್ 6ನೇ, ಗ್ರಂಥಾಲಯ ಮಂತ್ರಿಯಾಗಿ ನಿವೇದಿತಾ 7ನೇ, ಉಪ ಗ್ರಂಥಾಲಯ ಮಂತ್ರಿಯಾಗಿ ನೀಷ್ಮಾ 6ನೇ, ಸ್ವಚ್ಛತಾ ಮಂತ್ರಿಯಾಗಿ ಲಿಖಿತ್ ಬಿ. 7ನೇ, ಉಪ ಸ್ವಚ್ಛತಾ ಮಂತ್ರಿಯಾಗಿ ಶೋಭಿತ್ 6ನೇ, ತೋಟಗಾರಿಕೆ ಮಂತ್ರಿಯಾಗಿ ವಿವೇಕ್ 7ನೇ, ಉಪ ತೋಟಗಾರಿಕೆ ಮಂತ್ರಿಯಾಗಿ ತೀಕ್ಷ 6ನೇ, ಶೋಧನ ಮಂತ್ರಿಯಾಗಿ ನಿರೀಕ್ಷ 6ನೇ, ಉಪ ಶೋಧನ ಮಂತ್ರಿಯಾಗಿ ಸುಪ್ರೀತಾ 6ನೇ, ವಾರ್ತ ಮಂತ್ರಿಯಾಗಿ ಶ್ರೇಯಾ 6ನೇ, ಉಪ ವಾರ್ತ ಮಂತ್ರಿಯಾಗಿ ಲಕ್ಷ್ಮಿತಾ 6ನೇ, ವಿರೋಧ ಪಕ್ಷದ ನಾಯಕನಾಗಿ ಚೈತ್ರೇಶ್ 7ನೇ, ಉಪ ವಿರೋಧ ಪಕ್ಷದ ನಾಯಕನಾಗಿ ವಿಜಿತ್‌ 6ನೇ ತರಗತಿ ವಿದ್ಯಾರ್ಥಿಗಳು ಆಯ್ಕೆಯಾದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕಿಯರು ಉಪಸ್ಥಿತರಿದ್ದರು. ಅದ್ವಿತಿ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಣಮ್ಯ ಸ್ವಾಗತಿಸಿ, ಹರ್ಷಿತ್ ವಂದಿಸಿದರು.

p>

LEAVE A REPLY

Please enter your comment!
Please enter your name here