ಕುವೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಮದ್ದಡ್ಕದಲ್ಲಿ ಚರಂಡಿ ದುರಸ್ತಿ

0

ಕುವೆಟ್ಟು: ಮದ್ದಡ್ಕ ಪೇಟೆಯಲ್ಲಿ ಮಳೆಯ ನೀರು ಚರಂಡಿ ಇಲ್ಲದೆ ಮಾರ್ಗದಲ್ಲಿ ಹರಿದು, ಮಂಗಳೂರು ಕಡೆ ಹೋಗುವ ಪ್ರಯಾಣಿಕರ ಬಸ್ಸು ತಂಗುದಾಣ ಹಾಗೂ ಆಟೋ ರಿಕ್ಷಾ ನಿಲ್ದಾಣದ ಸುತ್ತ ಮುತ್ತ ಅಂಗಡಿಗಳಿಗೆ ನುಗ್ಗಿ ಬಂಡೀಮಠ ಮೈದಾನದಲ್ಲಿ ತುಂಬಿ ಅಂಗನವಾಡಿಗೆ ಹೋಗುವ ಮಕ್ಕಳಿಗೆ, ಜನರಿಗೆ ನಡೆದಾಡಲು ತೊಂದರೆಯಾಗುವುದನ್ನು ಕುವೆಟ್ಟು ಗ್ರಾಮ ಪಂಚಾಯತಿನ‌ ಗಮನಕ್ಕೆ ತರಲಾಯಿತು.

ತಕ್ಷಣ ಸ್ಪಂದಿಸಿ ಚರಂಡಿ ತಕ್ಕ ಮಟ್ಟಿಗೆ ದುರಸ್ತಿಗೊಳಿಸಲಾಯಿತು.ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಮಾರ್ಗದ ಬದಿಯ ಚರಂಡಿಯನ್ನು ದುರಸ್ತಿ ಮಾಡಲಾಗುವುದೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಸ ಸಿಲ್ವೆಸ್ಟರ್ ಮೊನಿಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here