

ಮಚ್ಚಿನ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ, ಜನಜಾಗೃತಿ ಗ್ರಾಮ ಸಮಿತಿ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯಿಂದ ಜೂನ್ 16ರಂದು ನಡೆಯಲಿರುವ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟದ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ.ಡಿ ವೀರೇಂದ್ರ ಹೆಗ್ಡೆ ಅವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು.

38ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಯಶಸ್ವಿಯಾಗಿ ನಡೆಯಲಿ ದೇವರ ಅನುಗ್ರಹ ತಮಗೆಲ್ಲರಿಗೆ ಇರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಅಧ್ಯಕ್ಷ ಹರ್ಷ ಬಳ್ಳಮಂಜ, ಮೇಲ್ವಿಚಾರಕ ವಸಂತ್, ಒಕ್ಕೂಟಗಳ ಅದ್ಯಕ್ಷ ಹರೀಶ್ ಸುವರ್ಣ, ನಾರಾಯಣ ಗೌಡ, ಜಯ ಪೂಜಾರಿ, ಧರ್ಣಪ್ಪ ಗೌಡ, ಸೇವಾ ಪ್ರತಿನಿಧಿಗಳಾದ ಪರಮೇಶ್ವರ್, ನಂದಿನಿ, ಕಲಾವತಿ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಶೌರ್ಯ ವಿಪತ್ತು ತಂಡಗಳ ಸದಸ್ಯರು ಉಪಸ್ಥಿತರಿದ್ದರು.