ಬಜಿರೆ ಶಾಲೆಯಲ್ಲಿ ಹದಿಹರೆಯದ ಮಕ್ಕಳಿಗೆ ಮಾಹಿತಿ ಕಾರ್ಯಗಾರ

0

ಬಜಿರೆ: ಬಜಿರೆ ಸ.ಉ.ಪ್ರಾ.ಶಾಲೆಯಲ್ಲಿ ಬಜಿರೆ ಪಿ.ಎಂ.ಶ್ರೀ ತಾಯಿಂದಿರ ಸಮಿತಿ ವತಿಯಿಂದ ಹದಿಹರೆಯದ ಮಕ್ಕಳಿಗೆ ಮಾಹಿತಿ ಕಾರ್ಯಗಾರ ಜೂನ್ 6ರಂದು ನಡೆಯಿತು.

ಹದಿಹರೆಯದವರ ಮಾನಸಿಕ ಹಾಗೂ ದೈಹಿಕ, ಆರೋಗ್ಯ, ಈ ಹಂತದಲ್ಲಿ ಆಗುವ ಬದಲಾವಣೆಗಳು, ಸ್ವಚ್ಚತೆಯ ಅರಿವು, ಮೊಬೈಲ್ ಬಳಕೆಯಿಂದ ಆಗುವ ದುಷ್ಟರಿಣಾಮಗಳು ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸ್ನೇಹಾ ಕ್ಲಿನಿಕ್‌ನ ಆಪ್ತ ಸಮಾಲೋಚಕಿ ರಮ್ಯ ರವರು ಕಾರ್ಯಗಾರ ನಡೆಸಿದರು.

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ದಿನೇಶ್ ಅಧ್ಯಕ್ಷತೆ ವಹಸಿದ್ದರು. ಬಜಿರೆ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ರಾಜೇಶ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಕಮಲಾಜಿ.ಎಸ್ ಜೈನ್ ಉಪಸ್ಥಿತರಿದ್ದರು.

ತಾಯಬಂದಿರ ಸಮಿತಿಯ ಸದಸ್ಯೆ ರಜನಿ ಸ್ವಾಗತಿಸಿ, ಉಪಾಧ್ಯಕ್ಷೆ ಸವಿತಾ ವಂದಿಸಿದರು. ಅಧ್ಯಕ್ಷೆ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸದಸ್ಯರು ಸಹಕರಿಸಿದರು.

p>

LEAVE A REPLY

Please enter your comment!
Please enter your name here