

ಬೆಳ್ತಂಗಡಿ: ಜೈ ಕರ್ನಾಟಕ ಗಾಯಕರ ಬಳಗ ಚಿಕ್ಕಮಗಳೂರು ಜಿಲ್ಲಾ ಪದಾಧಿಕಾರಿಗಳ ಮತ್ತು ತಾಲೂಕು ಸಮಿತಿ ಪದಗ್ರಹಣ ಮತ್ತು ಅಭಿನಂದನಾ ಕಾರ್ಯಕ್ರಮ ಜಿಲ್ಲೆಯ ಪಾಂಚಜನ್ಯ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷರಾದ ಮಹೇಂದ್ರ ಮಲ್ನಾಡ್ ಅವರ ಅಧ್ಯಕ್ಷತೆಯಲ್ಲಿ ಜೂನ್ 9ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ರಾಜ್ಯ ಗಾಯಕರ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಜೈ ಕರ್ನಾಟಕ ಗಾಯಕರ ಬಳಗ ಮೈಸೂರು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹೆ.ಎ ಶ್ರೀನಿವಾಸ್ ಮೂರ್ತಿ ಮಾಡಿ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಚಿವರು ಬಿ.ಬಿ ನಿಂಗಯ್ಯ ಸಂಗೀತ ಮತ್ತು ಕಲಾವಿದರ ಬಗ್ಗೆ ಮಾತನಾಡಿದರು. ನಂತರ ಚಿಕ್ಕಮಗಳೂರು ಜಿಲ್ಲಾ ಸಮಿತಿ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳ ಪದಗ್ರಹಣ ಮಾಡಿದರು.ರಾಜ್ಯ ಸಮಿತಿಯಿಂದ 10 ಕಲಾವಿದರಿಗೆ ಪ್ರೋತ್ಸಾಹ ಧನ ಸಹಾಯ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜೈ ಕರ್ನಾಟಕ ಗಾಯಕರ ಬಳಗ ರಾಜ್ಯ ಕಾರ್ಯದರ್ಶಿ ಯತೀಶ್, ರಾಜ್ಯ ಗೌರವಾಧ್ಯಕ್ಷರು ಎಂ.ಎಸ್ ನಂದ, ರಾಜ್ಯ ಕೋಶಾಧಿಕಾರಿ ಶಾರದಾ, ರಾಜ್ಯ ಕಾನೂನು ಸಲಹೆಗಾರರು ಲಕ್ಷ್ಮಿ ನಾರಾಯಣ, ದಕ್ಷಿಣ ಕನ್ನಡ ಚಿಕ್ಕಮಗಳೂರು ಉಡುಪಿ ಉಸ್ತುವಾರಿ ಇಸ್ಮಾಯಿಲ್, ಬಂಗಾಡಿ ಸಹ ಉಸ್ತುವಾರಿ ಶಾಹೀನ್ ಅತ್ತಾಜೆ, ದ.ಕ ಜಿಲ್ಲಾ ಪದಾಧಿಕಾರಿಗಳಾದ ರವಿ ನೇತ್ರಾವತಿ ನಗರ, ನವೀನ್ ಕುಮಾರ್ ಬಂಗಾಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಅಧ್ಯಕ್ಷೆಯಾದ ಕವೀತಾ ಡಿ ಪುತ್ತೂರು ಮತ್ತು ಚಿಕ್ಕಮಗಳೂರು ಜಿಲ್ಲಾ ಸಮಿತಿ ಎಲ್ಲ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರೂಪಾ ಧನ್ಯವಾದಗೈದರು.