ಕೊಯ್ಯೂರು: ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಕೊಯ್ಯೂರು: ಸರಕಾರಿ ಪ್ರೌಢಶಾಲೆಯಲ್ಲಿ ಜೂ 05ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಫೆಡರಲ್ ಬ್ಯಾಂಕ್ ಇದರ ಕೊಯ್ಯೂರು ಶಾಖೆಯ ಆಫೀಸರ್ ಸುಹಾಸ್ ಕೃಷ್ಣ ರವರು ಶಾಲಾವನದಲ್ಲಿ ಕಾಟು ಮಾವಿನ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.

ಬಳಿಕ ಮಾತಾಡಿ ನಾವು ನೈಸರ್ಗಿಕವಾಗಿ ಹಣ್ಣು ಕೊಡುವ ಮರಗಳ ಗಿಡಗಳನ್ನು ನೆಡುವುದಿಲ್ಲ. ಬದಲಾಗಿ ಕಡಿಯುತ್ತೇವೆ.ಇದರಿಂದಾಗಿ ಜೈವಿಕ ಅಸಮತೋಲನ ಉಂಟಾಗುತ್ತದೆ.ಆದರೆ ಕೊಯ್ಯೂರು ಪ್ರೌಢಶಾಲೆಯಲ್ಲಿ ಇಂತ ಗಿಡಗಳನ್ನು ನೆಟ್ಟು ಸಾಕುವುದರ ಮೂಲಕ ಇಲ್ಲಿಯ ವಿದ್ಯಾರ್ಥಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಶಾಲೆಯ ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಚಮೆ ಮಾತಾಡಿ ನಿಸರ್ಗವು ನಮಗೆ ಅನೇಕ ತರದ  ಆಹಾರ  ಪದಾರ್ಥಗಳನ್ನು ಕೊಡುವ ಗಿಡಗಳನ್ನು ನೀಡಿದೆ. ನಮ್ಮ ಹಿರಿಯರು ಅದನ್ನು ಗುರುತಿಸಿ ಬಳಸಿಕೊಂಡು ಬೆಳೆಸುತ್ತಿದ್ದರು.

ಆದರೆ ನಾವು ಇಂದು ಹೈಬ್ರಿಡ್ ತಳಿಗಳಿಗೆ ಪ್ರಾಮುಖ್ಯತೆ ನೀಡಿ ನಿಸರ್ಗದಲ್ಲಿ ಸ್ವಾಭಾವಿಕವಾಗಿ ಸಿಗುವ ಆಹಾರ ಪದಾರ್ಥಗಳ ಗಿಡಗಳನ್ನು ಮರೆಯುತ್ತೇವೆ ಅಲ್ಲದೆ ಅದರ ನಾಶಕ್ಕೂ ಕಾರಣರಾಗಿದ್ದೇವೆ. ಹಾಗಾಗಿ ಶಾಲೆಯ ವಿದ್ಯಾರ್ಥಿಗಳು ಈ ನೆಲೆಯಲ್ಲಿ ಶಾಲೆಯಲ್ಲಿ ಅವನತಿಯ  ಅಂಚಿನಲ್ಲಿ ರುವ ನೆಕ್ಕರೆ,ಕಾಟುಮಾವಿನ ಗಿಡಗಳನ್ನು ನೆಡುತ್ತಿದ್ದಾರೆ ಎಂದರು.

ಇಕೋ ಕ್ಲಬ್ ನೋಡಲ್ ಶಿಕ್ಷಕಿ ಬೇಬಿ ಸ್ವಾಗತಿಸಿದರು. ರಾಮಚಂದ್ರ ದೊಡಮನಿ ವಂದಿಸಿದರು.ಪ್ರವೀಣ್ ಕುಮಾರ್ ನಿರೂಪಿಸಿದರು.ಬ್ಯಾಂಕಿನ ಅಸೋಶೀಯೇಟ್ಸ್ ಗಳಾದ ಹರಿರಂಗ್ ಮತ್ತು ವಿಷ್ಣು ದತ್ ಉಪಸ್ಥಿತರಿದ್ದರು. ಬಳಿಕ ಸುಧಾಕರ ಶೆಟ್ಟಿ ಮತ್ತು ಗೀತಾ ಇವರ ನೇತೃತ್ವದಲ್ಲಿ ಶಾಲೆಯ ಪರಿಸರದಲ್ಲಿ ಸುಮಾರು ಎಪ್ಪತ್ತೈದು ಮಾವಿನ ಗಿಡಗಳನ್ನು ನೆಡಲಾಯಿತು.

p>

LEAVE A REPLY

Please enter your comment!
Please enter your name here