ಪೆರೋಡಿತ್ತಾಯಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಗೆ ಹಳೇ ವಿದ್ಯಾರ್ಥಿ ಸಂಘದಿಂದ ಉಚಿತ ಪುಸ್ತಕ ವಿತರಣೆ- ಹಿರಿಯ ಸಾಹಿತಿ ಆದ “ಮನುಶ್ರೀ” ಪ್ರಶಸ್ತಿ ಪುರಸ್ಕತ ಪ.ರಾಮಕೃಷ್ಣ ಶಾಸ್ತ್ರಿಗಳಿಗೆ ಸನ್ಮಾನ

0

ತೆಂಕಕಾರಂದೂರು: ಸರಕಾರಿ ಪ್ರಾಥಮಿಕ ಶಾಲೆಯ ಸುಮಾರು 80 ವಿದ್ಯಾರ್ಥಿಗಳಿಗೆ ಉಚಿತವಾಗಿ ಬರೆಯುವ ಪುಸ್ತಕ, ಪೆನ್ನುಗಳನ್ನು ಶಾಲೆಯ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಜೂ.05ರಂದು ನೀಡಲಾಯಿತು.

ಇದರ ನೇತೃತ್ವವನ್ನು ಶಾಲಾ ಹಳೇ ವಿದ್ಯಾರ್ಥಿಯಾಗಿರುವ, ಮುಸ್ತಫಾ ರವರ ಮುಂದಾಳತ್ವದಲ್ಲಿ ಹಾಗು ಎಲ್ಲಾ ಹಳೇ ವಿದ್ಯಾರ್ಥಿಗಳ ಸಹಕಾರದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಗ್ರಾಮದವರೇ ಆದ “ಮನುಶ್ರೀ” ಪ್ರಶಸ್ತಿ ಪುರಸ್ಕತ ಪ.ರಾಮಕೃಷ್ಣ ಶಾಸ್ತ್ರಿಗಳನ್ನ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಅಳಿಮಾರು ವಹಿಸಿದ್ದರು.

ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಕೆ.ವಸಂತ ಸಾಲಿಯಾನ್ ಕಾಪಿನಡ್ಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಮಾಜಿ ಸೈನಿಕ ರಾಮನಾಥ ರೈ ಗರಿಯಾರು, ಶಾಲಾ ಎಸ್.ಎಂ.ಡಿ.ಸಿ ಅಧ್ಯಕ್ಷ ರಘುನಾಥ ಕಜ್ಜೇಲು, ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಜ್ಯೋತಿ ನಿರೂಪಿಸಿ, ಮುಖ್ಯೋಪಾಧ್ಯಾಯಿನಿ ಬೆನಡ್ಮಿಕ ಪಾಯ್ಸ್ ಸ್ವಾಗತಿಸಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನವಾಜ್ ಗಿಂಡಾಡಿ ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ಶಾಲಾ ಹಳೇ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಶಾಲಾ ಶಿಕ್ಷಕಿಯವರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here