ಕಳೆಂಜದಲ್ಲಿ ಬಿಜೆಪಿ ವಿಜಯೋತ್ಸವ ಸಂದರ್ಭದಲ್ಲಿ ಮನೆಯ ಆವರಣದೊಳಗೆ ನುಗ್ಗಿ ಪಟಾಕಿ ಸಿಡಿಸಿ ಸಂಭ್ರಮಿಸಿರುವುದು ಖಂಡನೀಯ- ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು

0

ಬೆಳ್ತಂಗಡಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಸಂಭ್ರಮಾಚರಣೆ ಮಾಡುವ ನೆಪದಲ್ಲಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿ ಇದ್ದರೂ ಕಾನೂನನ್ನು ಮೀರಿ ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಕಜೆ ಮನೆಯ ಕುಶಾಲಪ್ಪ ಗೌಡರ ಮನೆಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಳೆಂಜ ಗ್ರಾಮದ ಬಿಜೆಪಿ ಕಾರ್ಯಕರ್ತ ರಾಜೇಶ್ ಎಂಬಾತ ಸುಡುಮದ್ದನ್ನು ಸಿಡಿಸಿ ಮನೆಯಲ್ಲಿದ್ದ ಮಹಿಳೆಯರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ದೌರ್ಜನ್ಯವನ್ನು ನಡೆಸಿರುತ್ತಾರೆ.

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ತನ್ನ ಕುಟುಂಬದ ರಕ್ಷಣೆಗಾಗಿ ಕುಶಾಲಪ್ಪ ಗೌಡರು ಪ್ರತಿರೋಧವನ್ನು ತೋರಿರುತ್ತಾರೆ.ಈ ಸಂದರ್ಭದಲ್ಲಿ ನಡೆದ ಘಟನೆಯಲ್ಲಿ ಗಾಯಗಳು ಆಗಿರುತ್ತದೆ.

ಕಾನೂನು ಪ್ರಕಾರ ಪ್ರಸ್ತುತ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಇರುವಾಗ ಸಂಭ್ರಮಾಚರಣೆಯ ನೆಪದಲ್ಲಿ ಕುಶಾಲಪ್ಪ ಗೌಡರ ಆವರಣದ ಒಳಗೆ ಸುಡುಮದ್ದು ಸಿಡಿಸಿ ಸಂಭ್ರಮಾಚರಣೆ ಮಾಡಿರುವುದನ್ನು ಖಂಡಿಸುವುದಲ್ಲದೆ ಅಪ್ರಾಪ್ತ ಹೆಣ್ಣು ಮಗಳಿಗೆ ದೌರ್ಜನ್ಯ ಎಸಗಿರುವುದನ್ನು ಕೂಡ ನಾವು ಖಂಡಿಸುತ್ತೇವೆ.

ಈ ಸಮಯದಲ್ಲಿ ಪರಸ್ಪರ ಹಲ್ಲೆ ನಡೆದಿರುವುದು ವಿಷಾದನೀಯ ಎಂದು ಎಸ್.ಸಿ. ಘಟಕದ ಜಿಲ್ಲಾ ಅಧ್ಯಕ್ಷ ಜಿ.ಪ.ಮಾಜಿ ಸದಸ್ಯ ಶೇಖರ ಕುಕ್ಕೇಡಿ ಮತ್ತು ಎಸ್.ಸಿ ಘಟಕದ ಗ್ರಾಮೀಣ ಅಧ್ಯಕ್ಷ ನೇಮಿರಾಜ ಕಿಲ್ಲೂರು ಹೇಳಿದರು. ಅವರು ಜೂ.6ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈ ಪ್ರಕರಣವನ್ನು ರಾಜಕೀಯ ದುರುದ್ದೇಶಕ್ಕಾಗಿ ಬಿಜೆಪಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಇವರನ್ನು ಎಳೆದು ತಂದಿರುವುದು ದುರದೃಷ್ಟಕರ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆಯು ತುರ್ತು ಕಾರ್ಯ ಪ್ರರ್ವತರಾಗಿ ತಪ್ಪಿತ್ತಸ್ಥರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರಿಗಿಸಿರುವುದಕ್ಕೆ ನಾವು ಅಭಿನಂದಿಸುತ್ತೇವೆ.

ಆದರೆ ಬೆಳ್ತಂಗಡಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಅವುಗಳನ್ನು ರಕ್ಷಿತ್ ಶಿವರಾಂರವರ ಹೆಸರನ್ನು ಎಳೆದು ತರುತ್ತಿರುವುದು ಬಿಜೆಪಿಗೆ ಇದೊಂದು ಚಾಳಿಯಾಗಿ ಬಂದಿರುತ್ತದೆ. ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರು ಕಾನೂನಿನ ಪರಿಜ್ಞಾನವಿಲ್ಲದೆ ಮತ್ತು ವಾಸ್ತವಿಕ ತಿಳಿದುಕೊಳ್ಳದೆ ಸಾರ್ವಜನಿಕವಾಗಿ ಮಾತನಾಡಿರುವುದು ಖಂಡನೀಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಬೆಳ್ತಂಗಡಿ ಬ್ಲಾಕ್ ಗ್ರಾಮೀಣ ಅಧ್ಯಕ್ಷ ಸತೀಶ್ ಕೆ ಬಂಗೇರ ಕಾಶಿಪಟ್ಟ, ಬೆಳ್ತಂಗಡಿ ಬ್ಲಾಕ್ ನಗರ ಅಧ್ಯಕ್ಷ ಜಯಾನಂದ ಪಿಲಿಕಲ, ಗ್ರಾಮೀಣ ಎಸ್.ಸಿ ಘಟಕ ಬಿ.ಕೆ ವಸಂತ್, ಪಕ್ಷದ ಮುಖಂಡರರಾದ ಶ್ರೀಧ‌ರ್ ಕಳೆಂಜ, ಜೈಸನ್‌ ಪಟ್ಟೇರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here