ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಮತ್ತು ಶೌರ್ಯ ವಿಪತ್ತು ಘಟಕದ ಸಹಕಾರದೊಂದಿಗೆ ತಾಲೂಕಿನಾದ್ಯಂತ 5,000 ಹಣ್ಣಿನ ಹಾಗೂ ಅರಣ್ಯ ಗಿಡಗಳ ನಾಟಿಗೆ ಚಾಲನೆ

0

ಬೆಳ್ತಂಗಡಿ: ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಮತ್ತು ಶೌರ್ಯ ವಿಪತ್ತು ಘಟಕದ ಸಹಕಾರದೊಂದಿಗೆ ಬೆಳ್ತಂಗಡಿ ತಾಲೂಕಿನಾದ್ಯಂತ 5,000 ಹಣ್ಣಿನ ಹಾಗೂ ಅರಣ್ಯ ಗಿಡಗಳ ನಾಟಿಗೆ ಚಾಲನೆಯನ್ನು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿಯಲ್ಲಿ ಹಣ್ಣಿನ ಗಿಡವನ್ನು ನಾಟಿ ಮಾಡುವ ಮೂಲಕ, ತಾಲೂಕಿನಾದ್ಯಂತ 5000 ಹಣ್ಣಿನ ಹಾಗೂ ಅರಣ್ಯ ಗಿಡಗಳ ನಾಟಿಗೆ ಸುರೇಂದ್ರ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಗಳು ಚಾಲನೆಯನ್ನು ನೀಡಿದರು.

ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಬೆಳ್ತಂಗಡಿ, ಒಕ್ಕೂಟದ ಅಧ್ಯಕ್ಷ ಚರಣ್ ಕುಮಾರ್, ಉಪಾಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಅಕ್ಷತಾ, ಬೆಳ್ತಂಗಡಿ ಬಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು, ಮಾದರಿ ಶಾಲಾ ಮುಖ್ಯೋಪಾಧ್ಯಾಯ ಸೂರ್ಯನಾರಾಯಣ ಹಾಗು ಶಾಲಾ ಶಿಕ್ಷಕವೃಂದ, ಪೃಥ್ವಿ ಜ್ಯುವೆಲ್ಲರ್ನ ಮುಖ್ಯಸ್ಥರು, ಪೃಥ್ವಿ ಜುವೆಲ್ಲರ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಸೂರ್ಯನಾರಾಯಣ ಇವರು ಪರಿಸರ ದಿನಾಚರಣೆಯ ಪ್ರಯುಕ್ತ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.ಯೋಜನಾಧಿಕಾರಿ ಸುರೇಂದ್ರರವರು ಪರಿಸರ ದಿನಾಚರಣೆ ಪ್ರಯುಕ್ತ ನಾವು ಬೆಳ್ತಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸುಮಾರು 50ಕ್ಕೂ ಹೆಚ್ಚು ಗಿಡಗಳನ್ನು ಶಾಲಾ ಮೈದಾನದ ಸುತ್ತ ನಾಟಿ ಮಾಡಿರುತ್ತೇವೆ, ರಸ್ತೆ ಆಗಲಿಕರಣ, ಕಟ್ಟಡ ನಿರ್ಮಾಣ, ಕೃಷಿ ಮುಂತಾದ ಉದ್ದೇಶಗಳಿಗಾಗಿ ಪರಿಸರ ನಾಶವಾಗುತ್ತಿದೆ ಕಾಡು ಪ್ರಾಣಿಗಳು ಊರಿಗೆ ಬರುವ ಸುದ್ದಿಗಳನ್ನು ಇಂದು ನಾವು ಪೇಪರ್ ಮತ್ತು ಮಾಧ್ಯಮಗಳಲ್ಲಿ ಆಗಾಗ ಕೇಳುತ್ತಿರುತ್ತೇವೆ ಕಾಡುನಾಶ ಆಗಿರುವ ಪರಿಣಾಮ ಕಾಡುಪ್ರಾಣಿಗಳು ಆಹಾರವನ್ನು ಹುಡುಕಿಕೊಂಡು ನಾಡಿಗೆ ಬರುತ್ತದೆ ಹೀಗಾಗಿ ನಾವು ಕಾಡನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಸರಕಾರವು ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಂಡಿದೆ ಇದು ಬಹಳ ಅರ್ಥಪೂರ್ಣ ಕಾರ್ಯಕ್ರಮ ನಾವು ನಮ್ಮ ನಮ್ಮ ಮನೆಗಳಲ್ಲಿ ಪರಿಸರದಲ್ಲಿ ಗಿಡಗಳನ್ನು ನಾಟಿ ಮಾಡಿ ಅವುಗಳನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಇದರಿಂದ ನಮ್ಮ ಪರಿಸರ ಉಳಿಯುತ್ತದೆ ನಮ್ಮ ಮಕ್ಕಳು ಮನಸ್ಸು ಮಾಡಿದರೆ ಮರ ಗಿಡಗಳನ್ನು ಬೆಳೆಸಿ ಪರಿಸರದ ಉಷ್ಣತೆಯನ್ನು ಕಾಪಾಡುವಲ್ಲಿ ಪ್ರಯತ್ನ ಮಾಡಬಹುದು.

ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಯೋಜನೆಯ ಒಕ್ಕೂಟ ಇತರ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪರಿಸರ ಕಾರ್ಯಕ್ರಮವನ್ನು ನಡೆಸಲು ಪ್ರೇರಣೆ ನೀಡುತ್ತಿದ್ದಾರೆ.

ಈ ಗಿಡಗಳನ್ನು ಪೋಷಿಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ತಾಲೂಕಿನ ಕೃಷಿ ಅಧಿಕಾರಿ ರಾಮ್ ಕುಮಾರ್, ಮೇಲ್ವಿಚಾರಕ ಹರೀಶ್, ಸೇವಾಪ್ರತಿನಿಧಿ ಜ್ಯೋತಿ ಉಪಸ್ಥಿತರಿದ್ದರು.

ಶಾಲಾ-ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೀನಕುಮಾರು ಧನ್ಯವಾದಗಳು.

LEAVE A REPLY

Please enter your comment!
Please enter your name here