ಬೆಳ್ತಂಗಡಿ: ಜ್ಞಾನವಿಕಾಸ ಸಂಯೋಜಕರ ಕ್ರಿಯಾಯೋಜನೆ ಸಭೆಯ ಕಾರ್ಯಕ್ರಮವನ್ನು ಗೌರವಾನ್ವಿತ ತಾಲೂಕು ಯೋಜನಾಧಿಕಾರಿ ಸುರೇಂದ್ರ ರವರು ಚಾಲನೆ ನೀಡಿದರು.
ಜ್ಞಾನವಿಕಾಸಕೇಂದ್ರದ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ವಾತ್ಸಲ್ಯ ಕಾರ್ಯಕ್ರಮದ ಬಗ್ಗೆ ತಿಳಿಸಿದರು.ಕೇಂದ್ರದ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಸುವಂತೆ ಸೇವಾಪ್ರತಿನಿಧಿಯವರು ಜವಾಬ್ದಾರಿ ವಹಿಸುವಂತೆ ತಿಳಿಸಿದರು.
ಜ್ಞಾನವಿಕಾಸ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಅಮೃತ ರವರು ಕೇಂದ್ರ ನಿರ್ವಹಣೆಯಲ್ಲಿ ಸಂಯೋಜಕರ ಪಾತ್ರದ ಬಗ್ಗೆ, ದಾಖಲಾತಿ ನಿರ್ವಹಣೆ ಬಗ್ಗೆ, ಕೇಂದ್ರದಲ್ಲಿ ಹಾಜರಾತಿ ಹೆಚ್ಚಿಸಲು ಆಕರ್ಷಣೀಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿವ ಬಗ್ಗೆ ಮಾಹಿತಿ ನೀಡಿದರು.
2024-25ನೆ ಸಾಲಿನ ಕ್ರಿಯಾಯೋಜನೆ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುವ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ ಗೌರವಾನ್ವಿತ ನಿರ್ದೇಶಕ ಮಹಾಬಲ ಕುಲಾಲ್ ರವರು ಕೇಂದ್ರದ ಚಟುವಟಿಕೆಗಳು ಉತ್ತಮವಾಗಿರುವಂತೆ ಯಾವ ರೀತಿ ಕಾರ್ಯಕ್ರಮವನ್ನು ನಡೆಸಬೇಕು.
ವಿಶೇಷ ಕಾರ್ಯಕ್ರಮ ಅನುಷ್ಠಾನ ಮಾಡುವಾಗ ಸೇವಾಪ್ರತಿನಿಧಿಗಳು ಜವಾಬ್ದಾರಿ ವಹಿಸಬೇಕಾದ ಅಂಶಗಳ ಬಗ್ಗೆ ಸದಸ್ಯರ ಸಂಖ್ಯೆ ಕಡಿಮೆ ಇರುವ ಕೇಂದ್ರಕ್ಕೆ ಸದಸ್ಯರ ಸೇರ್ಪಡೆ ಮಾಡುವ ಬಗ್ಗೆ ತಿಳಿಸಿದರು.
ಉಜಿರೆ ವಲಯ ಮೇಲ್ವಿಚಾರಕಿ ವನಿತಾ ಕೇಂದ್ರದ ದಾಖಲಾತಿಗಳನ್ನು ಪರಿಶೀಲಿಸಿದರು. ಸಮನ್ವಯ ಅಧಿಕಾರಿ ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿ, ಸೇವಾಪ್ರತಿನಿಧಿ ಪ್ರಮೀಳಾ ಸ್ವಾಗತಿಸಿದರು.