ಬೆಳ್ತಂಗಡಿ: ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

0

ಬೆಳ್ತಂಗಡಿ: ಬೆಳ್ತಂಗಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯವರ ಸಹಕಾರದೊಂದಿಗೆ ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುರೇಂದ್ರರವರು, ಯೋಜನೆಯ ಬೆಳ್ತಂಗಡಿ ಘಟಕದ ವಲಯ ನಿರ್ವಹಣಾಧಿಕಾರಿ ಹರೀಶ್ ಗೌಡ, ವಲಯದ ಅಧ್ಯಕ್ಷ ಸೀತಾರಾಮ್, ಪ್ರತಿನಿಧಿ ಜ್ಯೋತಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನೀನಾಕುಮಾರ್, ಪ್ರಗತಿ ಧರ್ಮಸ್ಥಳ ಒಕ್ಕೂಟ ಬೆಳ್ತಂಗಡಿ ಇದರ ಅಧ್ಯಕ್ಷ ಚರಣ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯ ಸೂರ್ಯನಾರಾಯಣ ಪುತ್ತೂರಾಯರು ಹಾಗೂ ಶಾಲಾ ಶಿಕ್ಷಕರು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಾಲಾ ಆಟದ ಮೈದಾನದ ಸುತ್ತ ಹಾಗೂ ಶಾಲಾ ಆವರಣದಲ್ಲಿ ಪೇರಳೆ, ಹಲಸು, ಹೆಬ್ಬಲಸು, ಪುನರ್ಪುಳಿ, ನೆಲ್ಲಿ ಮೊದಲಾದ ಬಗೆಯ 30ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.

ಯೋಜನೆಯವರು ನೀಡಿದ ಈ ಗಿಡಗಳ ಜೊತೆಯಲ್ಲಿ ಪೃಥ್ವಿ ಜುವೆಲರ್ಸ್ ಬೆಳ್ತಂಗಡಿ ಇವರು ಸಹ ಕರಿಬೇವಿನ ಗಿಡಗಳನ್ನು ನೀಡಿ ಸಹಕರಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಸುರೇಂದ್ರರವರು ಹೆಚ್ಚು ಸಸ್ಯಗಳನ್ನ ನೆಡುವ ಜೊತೆಗೆ ಅವುಗಳನ್ನ ಹಾಗೆ ಉತ್ತಮ ರೀತಿಯಲ್ಲಿ ಪೋಷಣೆ ಮಾಡಬೇಕೆಂದು ಮಕ್ಕಳಿಗೆ ಸಂದೇಶವನ್ನು ನೀಡಿದರು.

ಸಸ್ಯವನ್ನ ನೀಡಿ ಸಹಕರಿಸಿದ ಸರ್ವರಿಗೂ ಮುಖ್ಯ ಶಿಕ್ಷಕರು ಧನ್ಯವಾದಗಳು ಅರ್ಪಿಸಿದರು. ಬಂದಂತವರು ಶಾಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ವಿತರಿಸಿದರು.

p>

LEAVE A REPLY

Please enter your comment!
Please enter your name here