ಕಕ್ಯಪದವು: ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ

0

ಕಕ್ಯಪದವು: ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.ವಿದ್ಯಾರ್ಥಿಗಳನ್ನು ಸ್ವಾಗತಿಸಲು ಎಲ್ ಸಿ ಆರ್ ವಿದ್ಯಾಸಂಸ್ಥೆಯು ಬಣ್ಣದ ತೋರಣ ಹಾಗೂ ಬಲೂನುಗಳು ಪುಟಾಣಿಗಳ ಗಮನ ಸೆಳೆಯಿತು.

ಶಾಲೆಯ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳಿಗೆ ಸೇರ್ಪಡೆಗೊಂಡ ಮಕ್ಕಳನ್ನು ಹಾಗೂ ವಿವಿಧ ತರಗತಿಗಳಿಗೆ ಹೊಸದಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳನ್ನು ಶಾಲಾ ಬ್ಯಾಂಡ್ ಸೆಟ್ ಹಾಗೂ ಪುಷ್ಪವೃಷ್ಟಿಯ ಮೂಲಕ ಸ್ವಾಗತಿಸಲಾಯಿತು.

ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ವಿಜಯಾ.ಕೆ. ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿ ತರಗತಿಗೆ ಪ್ರೀತಿಪೂರ್ವಕವಾಗಿ ಆಹ್ವಾನಿಸಿದರು.

ಸಂಸ್ಥೆಯ ಪ್ರಾಂಶುಪಾಲರು ಜೋಸ್ಟನ್ ಲೋಬೊ, ಸಂಸ್ಥೆಯ ಸಂಯೋಜಕರು ಯಶವಂತ್ ಜಿ.ನಾಯಕ್ ಮಕ್ಕಳನ್ನು ಸ್ವಾಗತಿಸಿ ಈ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶುಭ ಕೋರಿದರು.

ಬೋಧಕ, ಬೋಧಕೇತರ ವರ್ಗದವರು ಅತ್ಯಂತ ಉತ್ಸುಕತೆಯಿಂದ ಈ ಪ್ರಾರಂಭೋತ್ಸವದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here