ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಪ್ರತಿಭಾ ಸಂಗಮ

0

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಪುಣ್ಯ ಕ್ಷೇತ್ರ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಸಂಡೆ ಸ್ಕೂಲ್ ವತಿಯಿಂದ 2023-24ನೇ ಸಾಲಿನಲ್ಲಿ ಶೈಕ್ಷಣಿಕ ಹಾಗೂ ಇತರೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರನ್ನು ಜೂ. 02ನೇ ರಂದು ಮಾರ್ ವೆಳ್ಳಾ ಪಳ್ಳಿ ಸಭಾಂಗಣದಲ್ಲಿ ನಡೆದ ಪ್ರತಿಭಾ ಸಂಗಮ ಹಾಗೂ ಸಂಡೆ ಸ್ಕೂಲ್ ಅಧ್ಯಯನ ವರ್ಷ-2024ರ ಉದ್ಘಾಟನಾ ಸಮಾರಂಭದಲ್ಲಿ ಗುರುತಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿದ ಸಾಹಿತಿ ಜೆಸ್ಸಿ ಪಿ.ವಿ ವಿದ್ಯಾರ್ಥಿಗಳು ಜ್ಞಾನ ದಷ್ಟೇ ಸದ್ಗುಣಗಳು ವ್ಯಕ್ತಿತ್ವದ ಜೊತೆಯಾದಾಗ ಮಾತ್ರ ಸಮಗ್ರ ವ್ಯಕ್ತಿತ್ವ ಬೆಳೆಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚ್ ನ ಧರ್ಮ ಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು ವಹಿಸಿದ್ದರು.

ಸಮಾರಂಭ ದಲ್ಲಿ ಸಹಕಾರಿ ಕೃಷಿ ಪತ್ತಿನ ಬ್ಯಾಂಕ್ ನ ನಿವೃತ್ತ ಸೇಬಾಷ್ಟಿಯನ್ ಪುಳಿಕಾಯತ್ ಅವರ ದೀರ್ಘ ಕಾಲದ ಸೇವೆ ಹಾಗೂ ಚರ್ಚ್ ಗೆ ನೀಡಿರುವ ಸೇವೆಯನ್ನು ಸ್ಮರಣಿಕೆ ಕೊಟ್ಟು ಶ್ಲಾಗಿಸಲಾಯಿತು.

ದ್ವಿತೀಯ ಪಿ ಯು ಸಿ ಮತ್ತು ಹತ್ತನೇ ತರಗತಿಯಲ್ಲಿ ವಿಶಿಷ್ಟ ಸಾಧನೆ ಗೈದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಂಡೆ ಸ್ಕೂಲ್ ನಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗೂ ಬಹುಮಾನ ವಿತರಿಸಲಾಯಿತು.

ವಂದನಿಯ ಸಿಸ್ಟೆರ್ ಲಿಸ್ ಮಾತ್ಯು, ರೊಯ್ ಕೊಳಮ್ ಗರಾತ್ತ್, ನಿವ್ರತ್ತ ಸೈನಿಕ ಹಾಗೂ ಟ್ರಸ್ಟಿ ಅಲೆಕ್ಸ್ ಚೆ೦ಪಿತಾನಮ್, ರಕ್ಷಕ ಶಿಕ್ಷಕ ಸಂಘದ ಪ್ರಕಾಶ್ ಕೆ ಜೆ, ಲಿಸ್ಸಿ, ಕುಮಾರ ಆಲ್ಟೊ ಮೊದಲದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here