ನಿಟ್ಟಡೆ ಶಾಲಾ ಪ್ರಾರಂಭೋತ್ಸವ

0

ನಿಟ್ಟಡೆ: ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ನಿಟ್ಟಡೆ 2024-25 ನೇ ಸಾಲಿನ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಎಸ್ ಡಿ ಎಂ ಸಿ ಅಧ್ಯಕ್ಷ ಮಹಮದ್ ಅಶ್ರಫ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಶುಭ ಹಾರೈಸಿದರು.

ಹೊಸದಾಗಿ ಸೇರಿದ ಮಕ್ಕಳಿಗೆ ಕಿರೀಟ ತೊಡಿಸಿ ಸ್ಟಾರ್ ಕೊಟ್ಟು ಕಂಪಾಸ್ ಬಾಕ್ಸ್, ಪೆನ್ಸಿಲ್, ರಬ್ಬರ್, ನೋಟ್ ಬುಕ್ ಕೊಟ್ಟು ಬ್ಯಾಂಡ್ ನೊಂದಿಗೆ ಸ್ವಾಗತ ಮಾಡಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಚಿತವಾಗಿ ವಿತರಿಸಿದ ಪಠ್ಯಪುಸ್ತಕ ಮತ್ತು ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಎಸ್ ಡಿ ಎಂ ಸಿ ಮತ್ತು ಶಿಕ್ಷಕರಿಂದ ವಿತರಿಸಲಾಯಿತು.

ಎಸ್ ಡಿ ಎಂ ಸಿ ಸದಸ್ಯರು, ತಾಯಂದಿರ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು.

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಆರತಿ ಸ್ವಾಗತಿಸಿ, ಶೈಕ್ಷಣಿಕ ವರ್ಷದ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ಶಿಕ್ಷಕ ಗಣೇಶ್ ವಂದಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here