ಕೊಕ್ಕಡ: ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ

0

ಕೊಕ್ಕಡ: ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಮೇ 31ರಂದು ಶಾಲಾ ಸಭಾಭವನದಲ್ಲಿ ನಡೆಸಲಾಯಿತು.

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನಾಗೀತೆಯೊಂದಿಗೆ ದೇವರ ಕೃಪೆಯನ್ನು ಬೇಡಿದರು.

ಶಾಲಾ ವಿದ್ಯಾರ್ಥಿಗಳು ಸ್ವಾಗತ ನೃತ್ಯದ ಮೂಲಕ ಸರ್ವರನ್ನು ಸ್ವಾಗತಿಸಿದರು.

ದೀಪ ಬೆಳಗಿಸಿ 2024-25ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಉದ್ಘಾಟಿಸಿದರು. ಪ್ರಾಂಶುಪಾಲೆ ಭಗಿನಿ ಚೈತನ್ಯರವರು ನೂತನವಾಗಿ ಶಾಲಾ ಸಂಚಾಲಕರಾಗಿ ಅಧಿಕಾರ ಸ್ವೀಕರಿಸಿದ ವಂದನೀಯ ಫಾ.ಜಿಬಿನ್ ರವರನ್ನು ಪರಿಚಯಿಸಿ, ಶಾಲಾ ಮಕ್ಕಳಿಗೆ ಶುಭ ಹಾರೈಸಿ ಹಾಗೂ ನೆರೆದಿರುವ ಸರ್ವರನ್ನು ಮನದಾಳದ ಮಾತುಗಳಿಂದ ಸ್ವಾಗತಿಸಿದರು.

ಶಾಲೆಗೆ ಹೊಸದಾಗಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳಿಗೆ ಬಲೂನು ಮತ್ತು ಸಿಹಿತಿಂಡಿ ಹಾಗೂ ಹೊಸದಾಗಿ ನೇಮಿಸಿದ ಶಿಕ್ಷಕರಿಗೆ ಹೂವನ್ನು ನೀಡಿ ಸಾಂಕೇತಿಕವಾಗಿ ಶಾಲಾ ಆಡಳಿತ ಮಂಡಳಿಯ ಪರವಾಗಿ ಫಾ. ಅರುಣ್ ರವರು ಬರಮಾಡಿಕೊಂಡರು. ಹತ್ತನೇ ತರಗತಿ ವಿದ್ಯಾರ್ಥಿನಿ ಕು. ಸನುಷಾ ನೃತ್ಯದೊಂದಿಗೆ ಮನರಂಜಿಸಿದಳು.

ಶಾಲಾ ಸಂಚಾಲಕ ಫಾ.ಜಿಬಿನ್ ರವರು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ ಅಭಿನಂದನೆ ಸಲ್ಲಿಸಿ ಪ್ರಸಕ್ತ ಸಾಲಿಗೆ ಶುಭ ಹಾರೈಸಿದರು.

ಸಹಶಿಕ್ಷಕಿಯರಾದ ಕು. ಲಿಸ್ಮಿ ಸರ್ವರನ್ನು ವಂದಿಸಿ, ಕು.ಪ್ರಣೀತಾ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

LEAVE A REPLY

Please enter your comment!
Please enter your name here