ಸ್ಟಾಕ್ ಮಾರ್ಕೆಟ್ ಹೂಡಿಕೆಯ ಹೆಸರಿನಲ್ಲಿ ಬಂದ ಮೆಸೇಜ್ ಅನ್ನು ನಂಬಿ ರೂ 4.65ಲಕ್ಷ ಕಳೆದುಕೊಂಡ ಮಾಲಾಡಿಯ ಮಹಿಳೆ

0

ಬೆಳ್ತಂಗಡಿ: ಸ್ಟಾಕ್ ಮಾರ್ಕೆಟ್ ಹೂಡಿಕೆಯ ಹೆಸರಿನಲ್ಲಿ ಬಂದ ಮೆಸೇಜ್ ಅನ್ನು ನಂಬಿ ಮಾಲಾಡಿಯ ಮಹಿಳೆಯೊಬ್ಬರು ರೂ 4.65ಲಕ್ಷ ಹಣ ಕಳೆದುಕೊಂಡಿದ್ದು ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಮಾಲಾಡಿ ನಿವಾಸಿಯಾಗಿರುವ ಮಹಿಳೆಗೆ 2024ರ ಏಪ್ರಿಲ್ ತಿಂಗಳಿನಲ್ಲಿ ಫೇಸ್ ಬುಕ್ ನಲ್ಲಿ ಬಂದ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಕ್ಲಾಸ್ ನ ಲಿಂಕ್ ನಲ್ಲಿ ಕಂಪೆನಿಯ ಖಾತೆಯಲ್ಲಿ ಹೂಡಿಕೆ ಮಾಡುವ ಸಲುವಾಗಿ ಒಟ್ಟು ರೂ 1,45,000 ಹಣವನ್ನು‌ ಹೂಡಿಕೆ ಮಾಡುತ್ತಾರೆ ಇದಾದ ಬಳಿಕ ಅವರಿಂದ ಬಂದ ಬೇಡಿಕೆಯಂತೆ ರೂ 3,20,000ಹಣವನ್ನು ಹೂಡಿಕೆ ಮಾಡಿದ್ದಾರೆ. ಇದಾದ ಬಳಿಕ ಇವರು ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಹಣ ನೀಡದಿದ್ದಾಗ ಅವರ ವಾಟ್ಸಪ್ ಗ್ರೂಪಿನಿಂದ ರಿಮೂವ್ ಮಾಡಿದ್ದಾರೆ. ತಾನು ವಂಚನೆಗೆ ಒಳಗಾದ ಬಗ್ಗೆ ತಿಳಿದು ಮಹಿಳೆ ಪೂಂಜಾಲಟ್ಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪುಂಜಾಲಕಟ್ಟೆ ಪೊಲೀಸರು ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಜನರು ಎಚ್ಚರಿಕೆ ವಹಿಸದೆ ಇಂತಹ ವಂಚನೆಯ ಜಾಲಕ್ಕೆ ಬಲಿಯಾಗುತ್ತಿರುವುದು ದುರಂತವಾಗಿದೆ.

LEAVE A REPLY

Please enter your comment!
Please enter your name here