ಕಾಶಿಪಟ್ಣ ಸ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

0

ಕಾಶಿಪಟ್ಣ: ಕಾಶಿಪಟ್ಣ ಸ.ಹಿ.ಪ್ರಾ.ಶಾಲೆಯಲ್ಲಿ 2024-25ನೇ ಸಾಲಿನಲ್ಲಿ ಹೊಸದಾಗಿ ಶಾಲೆಗೆ ಸೇರ್ಪಡೆಗೊಂಡ ಮಕ್ಕಳನ್ನು ಬ್ಯಾಂಡ್ ಸೆಟ್ ಮೂಲಕ ಹಾಗೂ ಸಿಹಿ ನೀಡುವುದರ ಮೂಲಕ ಮೇ 31 ರಂದು ಸ್ವಾಗತಿಸಲಾಯಿತು.

ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಳೆ ವಿದ್ಯಾರ್ಥಿ ಸಂಘ ಸದಸ್ಯರು, ಮಾತೆಯರ ಸಮಿತಿಯವರು, ಪೋಷಕರು ಜೊತೆಗಿದ್ದರು.

ನಂತರ ಪೋಷಕರ ಸಭೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ.ಸಿ ಸದಸ್ಯ ಹಮೀದ್ ಇವರು ಪೆನ್ಸಿಲ್ ಕೊಡುಗೆಯಾಗಿ ನೀಡಿದರು.ಸರಕಾರದಿಂದ ವಿತರಣೆಯದ ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು.

ಮುಖ್ಯ ಶಿಕ್ಷಕ ಕೃಷ್ಣಪ ನಾಯ್ಕ್ ಸ್ವಾಗತಿಸಿ, ಸಹಶಿಕ್ಷಕಿ ಪ್ರಿಯ ವಂದನಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here