ಪಡಂಗಡಿ: ಕಟ್ಟಡಕ್ಕೆ ಸಿಡಿಲು ಬಡಿತ

0

ಪಡಂಗಡಿ: ಪಡಂಗಡಿ ಗ್ರಾಮದ ಪಾದೆ ನಿವಾಸಿ ಹಾಮದ್ ರವರ ಮನೆಯ ಪಕ್ಕದಲ್ಲಿರುವ ಕಟ್ಟಡಕ್ಕೆ ಮೇ 29ರಂದು ಸಿಡಿಲು ಬಡಿದು ಬೆಂಕಿ ಹತ್ತಿದ ಘಟನೆ ನಡೆದಿದೆ.

ಕಟ್ಟಡದ ಒಳಗೆ ಅಡಿಕೆ, ಅಕ್ಕಿ, ಬೈ ಹುಲ್ಲು ಇನ್ನಿತರ ವಸ್ತುಗಳ ಸ್ಟಾಕ್ ಇತ್ತು ಎನ್ನಲಾಗಿದೆ.

ಎಲ್ಲಾ ಸುಟ್ಟು ಹೋಗಿದ್ದು ಸುಮಾರು ಅಂದಾಜು 4 ರಿಂದ 5 ಲಕ್ಷದಷ್ಟು ನಷ್ಟ ಸಂಭವಿಸಿದೆ.

ಮನೆಯವರು ಹೊರಗಡೆ ಹೋಗಿದ್ದು ಯಾರು ಇಲ್ಲದ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

ಸ್ಥಳಕ್ಕೆ ಪಡಂಗಡಿ ಗ್ರಾಮ ಪಂಚಾಯತ್ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಭೇಟಿ ನೀಡಿ ಪರಿಶಿಲನೆ ನಡೆಸಿದರು.

LEAVE A REPLY

Please enter your comment!
Please enter your name here