ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ

0

ಉಜಿರೆ:ಎಸ್.ಡಿ.ಎಮ್  ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಇಲ್ಲಿ 2023-24ರ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದ್ದು, ಫಲಿತಾಂಶದ ಬೆನ್ನೆಲುಬಾದ ಶಾಲಾ ಬೋಧಕ-ಬೋಧಕೇತರ ಸಿಬ್ಬಂದಿಗಳನ್ನು ಗುರುತಿಸಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ.ಎಸ್ ಮೇ 27ರಂದು ಶುಭನುಡಿಗಳನ್ನಾಡಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆದಿದ್ದ ಅಟಲ್ ಟಿಂಕರಿಂಗ್ ಲ್ಯಾಬ್ ಮ್ಯಾರಥಾನ್ ನಲ್ಲಿ ಭಾಗವಹಿಸಿ, ಅತ್ಯುತ್ತಮ 100 ತಂಡಗಳ ಪೈಕಿ  ಆಯ್ಕೆ ಆಗಿರುವ ವಿದ್ಯಾರ್ಥಿ ಸೋಹನ್ ಶೆಟ್ಟಿ ಹಾಗೂ ಪವನ್ ಕೃಷ್ಣ ಇವರಿಂದ ತಮ್ಮ ಯೋಜನೆ ‘ಸ್ಮಾರ್ಟ್ ಸೋಲಾರ್ ಟ್ರಾಕರ್’ ಪ್ರಸ್ತುತಿಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕಿ ಶಾಂಟಿ ಜಾರ್ಜ್ ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿ, ಶಿಕ್ಷಕಿ ನಯನ ವಂದಿಸಿದರು.

LEAVE A REPLY

Please enter your comment!
Please enter your name here