ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ- ತಾಲೂಕು ಕಚೇರಿಗೆ ಬ್ಲಾಕ್ ಕಾಂಗ್ರೆಸ್ ಕಚೇರಿ ಎಂದು ಬೋರ್ಡ್ ಅಳವಡಿಕೆ- ಪೊಲೀಸರ ಕಾಲರ್ ಹಿಡಿಯಲು ಸಿದ್ಧ, ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ, ಬೇಲ್ ಬೇಡ ಜೈಲಿಗೆ ಹೋಗಲೂ ಸಿದ್ಧ: ಪೂಂಜ

0

ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧನ ಖಂಡಿಸಿ ಮೇ ೨೦ರಂದು ಬೆಳ್ತಂಗಡಿಯಲ್ಲಿ ಪಕ್ಷದ ವತಿಯಿಂದ ಬೃಹತ್ ಜಾಥಾ ಬಳಿಕ ಪ್ರತಿಭಟನೆ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಯಿತು.
ಲಾಯಿಲ ಸಂಗಮ ಸಭಾಭವನದಲ್ಲಿ ಸಭೆ ನಡೆಸಿದ ಬಳಿಕ ಮಧ್ಯಾಹ್ನ ಒಂದು ಗಂಟೆಗೆ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ಆಗಮಿಸಿದರು. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡ ಹರಿಕೃಷ್ಣ ಬಂಟ್ವಾಳ ಮತ್ತಿತರರು ಕಾಲ್ನಡಿಗೆಯಲ್ಲೇ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದರು. ಈ ವೇಳೆ ಪ್ರತಿಭಟನಾಕಾರರು ತಾಲೂಕು ಆಡಳಿತ ಸೌಧಕ್ಕೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಎಂದು ನಾಮಫಲಕ ಅಳವಡಿಸಿ, ಕಾಂಗ್ರೆಸ್ ಏಜೆಂಟ್ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಎಂದು ಧಿಕ್ಕಾರ ಕೂಗಿದರು.
ಹರೀಶ್ ಪೂಂಜರಿಂದ ಧಿಕ್ಕಾರ: ನಾಚಿಕೆಗೆಟ್ಟ ಪೊಲೀಸ್ ಅಧಿಕಾರಿಗಳಿಗೇ ಧಿಕ್ಕಾರ.. ನಾಚಿಕೆಗೆಟ್ಟ ಬೆಳ್ತಂಗಡಿ ತಹಶೀಲ್ದಾರ್ ಅವರಿಗೇ ಧಿಕ್ಕಾರ.. ಬೆಂಗಳೂರಿನ ಕಾಗೆಯ ಕೈಯಡಿಯಲ್ಲಿ ಕೆಲಸ ಮಾಡುವ ತಾಲೂಕಿನ ದಲ್ಲಾಳಿಗೇ ಧಿಕ್ಕಾರ.. ಧಿಕ್ಕಾರ ಎಂದು ಹರೀಶ್ ಪೂಂಜರು ಕಾರ್ಯಕರ್ತರೊಂದಿಗೆ ಧಿಕ್ಕಾರ ಕೂಗಿದರು.
ಬೆಳ್ತಂಗಡಿಯಲ್ಲಿ ದ್ವೇಷ ರಾಜಕೀಯ: ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜ, ತಾಲೂಕು ಕಚೇರಿಯು ಕಂದಾಯ ಇಲಾಖೆಯ ಕಚೇರಿ ಅಲ್ಲ. ಇದು ಕಾಂಗ್ರೆಸ್ ಆಫೀಸ್ ಆಗಿರುವ ಕಾರಣ ಇವತ್ತಿನಿಂದ ಈ ಕಚೇರಿಗೆ ಕಾಂಗ್ರೆಸ್ ಆಫೀಸ್ ಎಂದು ನಾಮಫಲಕ ಅಳವಡಿಸಿzವೆ. ಬೆಳ್ತಂಗಡಿಯಲ್ಲಿ ದ್ವೇಷ ರಾಜಕಾರಣ ಮಾಡುವ ಸ್ಥಿತಿ ಕಳೆದ ಐದು ವರ್ಷ ಇರಲಿಲ್ಲ. ಯಾವಾಗ ಮಲ್ಲೇಶ್ವರಂನಿಂದ ಒಂದು ಕಾಗೆ ಹಾರಿಕೊಂಡು ಬಂತೋ, ಆಮೇಲೆ ದ್ವೇಷ ರಾಜಕಾರಣ ನಡೆಯಿತು. ಕಾಗೆಯನ್ನು ಓಡಿಸಲು ಬಂದೂಕು ಬೇಡ, ಕಲ್ಬಿರು (ಚಾಟಿ ಬಿಲ್ಲು) ವಿನಲ್ಲಿ ಮಲ್ಲೇಶ್ವರಂಗೆ ಓಡಿಸುವ ಕೆಲಸವನ್ನು ಬೆಳ್ತಂಗಡಿಯ ಜನರು ಮಾಡುತ್ತಾರೆ ಎಂದರು.
ತಹಸೀಲ್ದಾರ್ ವಿರುದ್ಧ ಆರೋಪ: ಬಿಜೆಪಿ ಸರಕಾರ ಇರುವಾಗ ಕುತ್ತಿಗೆ ಹಿಡಿದಂತೆ ಆಗುತ್ತಿತ್ತು. ೧ ರೂಪಾಯಿ ಆಗುತ್ತಿರಲಿಲ್ಲ. ಕಾಂಗ್ರೆಸ್ ಸರಕಾರ ಬಂದ ಮೇಲೆ ಇದು ನನ್ನದೇ ರಾಜ್ಯ. ಲೂಟಿ ರಾಜ್ಯವಾಗಿದೆ. ೯೪ಸಿ, ಅಕ್ರಮ-ಸಕ್ರಮ, ಅಕ್ರಮ ಮರಳುಗಾರಿಕೆ, ಗಣಿಗಾರಿಕೆಯಲ್ಲಿ ಎಷ್ಟು ಬೇಕಾದರೂ ತೆಗೆದುಕೊಳ್ಳಬಹುದು ಎಂದು ತಹಸೀಲ್ದಾರ್ ನನ್ನ ಗೆಳೆಯರೊಬ್ಬರಲ್ಲಿ ಹೇಳಿದ್ದಾರೆಂದು ಶಾಸಕ ಹರೀಶ್ ಪೂಂಜ ಉಲ್ಲೇಖಿಸಿದರು. ಅದಕ್ಕೆ ಸಾಕ್ಷಿಯಾಗಿ ಪ್ರಮೋದ್ ಹಫ್ತಾ ಕೊಡಲಿಲ್ಲವೆಂದು ತಹಶೀಲ್ದಾರ್ ಅಕ್ರಮ ಕಲ್ಲು ಗಣಿಗಾರಿಕೆಗೆ ದಾಳಿ ನಡೆಸಿದ್ದಾರೆ. ಪ್ರಮೋದ್ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ್ದು ತಪ್ಪೇ- ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಕಾಂಗ್ರೆಸ್‌ನವರು ಯಾರೂ ಅಕ್ರಮ ಗಣಿಗಾರಿಕೆ, ಮರಳುಗಾರಿಕೆ ನಡೆಸುತ್ತಿಲ್ಲವೇ? ಅಂಬೇಡ್ಕರ್ ಕೊಟ್ಟಿರುವ ಖಾಕಿ ಹಾಕಿಕೊಂಡz ಆದರೆ ಸುಬ್ರಪುರ್ ಮಠ್ (ಇನ್ಸ್‌ಪೆಕ್ಟರ್) ನಾಳೆಯಿಂದ ಕಾಂಗ್ರೆಸ್ -ಬಿಜೆಪಿ ಎಂದು ನೋಡದೆ ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಮರಳುಗಾರಿಕೆ ಮಾಫಿಯಾಗಳನ್ನು ನಿಲ್ಲಿಸಿ. ಇಲ್ಲದಿದ್ದರೆ ನೀವು ಹಾಕಿರುವುದು ನಕಲಿ ಖಾಕಿ ಎಂದು ನಾನು ಹೇಳುತ್ತೇನೆ. ನೀವು ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.
ಶಶಿರಾಜ್ ಈ ಪ್ರಕರಣದಲ್ಲಿ ಇಲ್ಲ, ಅವರ ಹೆಸರು ಯಾಕೆ ಹಾಕಿದ್ದೀರಿ ಎಂದು ಪೊಲೀಸ್ ಅಧಿಕಾರಿಯಲ್ಲಿ ಕೇಳಿದಾಗ, ನಾನಲ್ಲ ಸರ್, ತಹಶೀಲ್ದಾರ್ ಹೆಸರು ನೀಡಿದ್ದು ಅಂತಾರೆ. ಅವರಲ್ಲಿ ಕೇಳಿದರೆ ನಾನು ಹೆಸರು ಕೊಡಲಿಲ್ಲ, ಇನ್ಸ್‌ಪೆಕ್ಟರ್ ಹಾಕಿದ್ದು ಅಂತಾರೆ. ಇವರಿಗೆ ಅಪ್ಪ ಯಾರೂಂತ ಇಲ್ಲ ಎಂದು ವ್ಯಂಗ್ಯವಾಡಿದರು. ನಿಮಗೆ ತಾಕತ್ತಿದ್ದರೆ ನಾವೇ ಹೆಸರು ಹಾಕಿದ್ದು ಎಂದು ಒಪ್ಪಿಕೊಳ್ಳಿ. ಯಾಕೆ ಜಾರಿಕೊಳ್ಳುತ್ತೀರಿ. ೪ನೇ ತಾರೀಕಿನ ನಂತರ ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆ, ಬಿಜೆಪಿ ಸರಕಾರ ಬರುತ್ತದೆ ಅಂತ ಗೊತ್ತಿದೆ, ಅದಕ್ಕೆ ನೀವು ಜಾರಿಕೊಳ್ಳುತ್ತಿದ್ದೀರಿ ಎಂದರು.
ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತನ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಬೆಳ್ತಂಗಡಿಯ ಕಾರ್ಯಕರ್ತರ ಪರವಾಗಿ ನಾನು ಠಾಣೆಗೆ ಹೋಗದೆ ನಿಮ್ಮ ಅಪ್ಪ ಹೊಗುತ್ತಾರಾ ಠಾಣೆಗೆ? ನನಗೆ ಒಂದು ಲಕ್ಷ ಮತ ನೀಡಿದ್ದು ಬಿಜೆಪಿ ಈ ಕ್ಷೇತ್ರ ಮತದಾರರ ರಕ್ಷಣೆ ಮಾಡಲು. ಇನ್ನು ಮುಂದೆಯೂ ಒಂದು ಗಂಟೆ ರಾತ್ರಿಗೆ ಠಾಣೆ, ತಹಶೀಲ್ದಾರ್ ಮನೆಗೆ ಹೋಗಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು.
ಅಂದು ಕಳೆಂಜದಲ್ಲಿ ಕೇಸು, ಇಂದು ವಿನಾಕಾರಣ ಕಾರ್ಯಕರ್ತನ ಜೈಲಿಗೆ ಹಾಕಿರುವುದನ್ನು ಪ್ರಶ್ನಿಸಿದ್ದಕ್ಕೆ ಕೇಸು ಹಾಕಿದ್ದೀರಿ. ಶಶಿಯನ್ನು ಅರೆಸ್ಟ್ ಮಾಡಿದಾಗ ತಹಶೀಲ್ದಾರ್, ಸುಬ್ರಪುರ್ ಮಠ್ ಹಾಗೂ ಎಸ್ಪಿಗೆ ಕರೆ ಮಾಡಿದರೂ ಫೋನ್ ತೆಗೆಯುವುದಿಲ್ಲ. ಅಧಿಕಾರಿಗಳು ಕಾಂಗ್ರೆಸ್ ಏಜೆಂಟರೇ? ಶಾಸಕ ಕರೆ ಮಾಡಿದಾಗ ಸ್ವೀಕರಿಸುವುದಿಲ್ಲ ಅಂದರೆ ನೇರವಾಗಿ ಹೇಳುತ್ತೇನೆ, ನೀವು ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದು ಟೀಕಿಸಿದರು.
ಜೈಲುವಾಸಕ್ಕೆ ಸಿದ್ಧ, ಬೇಲ್ ಬೇಡ: ಕಾರ್ಯಕರ್ತರಿಗೆ ಅನ್ಯಾಯವಾದಲ್ಲಿ ಜೈಲುವಾಸ ಅನುಭವಿಸಲು ಸಿದ್ಧ ಇರುವ ಶಾಸಕ ನಾನು. ಯಾವುದೇ ಕಾರಣಕ್ಕೂ ಬೇಲ್ ತೆಗೆದುಕೊಳ್ಳುವುದಿಲ್ಲ. ಕಾರ್ಯಕರ್ತರ ರಕ್ಷಣೆಯ ದೃಷ್ಟಿಯಿಂದ ಠಾಣೆಗೆ ಹೋಗಿ ಮಾತನಾಡಿzನೆ. ೧೪೪ ಸೆಕ್ಷನ್ ಹಾಕಿದರೂ ಭಾಜಪಾ ಕಾರ್ಯಕರ್ತರ ಪ್ರತಿಭಟನೆಯನ್ನು ನಿಲ್ಲಿಸಲು ಆಗುವುದಿಲ್ಲ ಎಂದು ಹರೀಶ್ ಪೂಂಜ ಹೇಳಿದರು.
ಒಂದು ವಾರ ಗಡುವು: ಈ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಶಿರಾಜ್ ಶೆಟ್ಟಿ ಇದ್ದಾರೋ, ಇಲ್ಲವೋ ಎಂಬುದನ್ನು ಕೂಲಂಕಷವಾಗಿ ತನಿಖೆ ಮಾಡಿ, ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡುತ್ತೇನೆ. ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಅಕ್ರಮ ಮಾಫಿಯಾಗಳ ಬಗ್ಗೆ ಬೆಳ್ತಂಗಡಿ ಪೊಲೀಸರಲ್ಲಿ ವಿಚಾರಿಸಿ, ದಾಳಿ ಮಾಡಿ. ನಿಮಗೆ ಒಂದು ವಾರದ ಗಡುವು ನೀಡುತ್ತೇನೆ. ಆ ನಂತರವೂ ಅಕ್ರಮ ಮಾಫಿಯಾಗಳು ನಡೆಯುತ್ತಿದ್ದರೆ ನಾನೇ ರೈಡ್ ಮಾಡುತ್ತೇನೆ. ಆಗ ಅದಕ್ಕೆ ಸಂಬಂಧಪಟ್ಟ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕೆಂದು ಶಾಸಕ ಹರೀಶ್ ಪೂಂಜ ಹೇಳಿದರು.
ತಾಲೂಕು ಕಚೇರಿ ಸಮಸ್ಯೆಗಳಿಗೆ ಅಂತ್ಯ: ತಾಲೂಕು ಕಚೇರಿ ಗುಡಿಸದೆ ೨ ತಿಂಗಳಾಯಿತು. ವಸಂತ ಬಂಗೇರರು ಕಟ್ಟಿಸಿಕೊಟ್ಟ ನಂತರ ಜೇಡರ ಬಲೆಯನ್ನು ತೆಗೆದಿಲ್ಲ. ಶೌಚಾಲಯ ಸ್ವಚ್ಛ ಇಲ್ಲ, ತಾಲೂಕು ಕಚೇರಿ ಮುಂದೆ ಕಸದ ರಾಶಿಯಿದೆ. ಇಂಥದ್ದಕ್ಕೆಲ್ಲ ಜೂನ್ ೪ರ ನಂತರ ಇತಿಶ್ರೀ ಹಾಕುವ ಕಾರ್ಯವನ್ನು ಕ್ಷೇತ್ರದ ಶಾಸಕನಾಗಿ ಮಾಡುತ್ತೇನೆ ಎಂದು ಹೇಳಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೆಳಾಲು, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣೇಶ್ ನಾವೂರು, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಮಂಜುಳಾ ರಾವ್, ತಾಲೂಕು ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಹಾಗೂ ತಾಲೂಕಿನ ವಿವಿಧ ಮಂಡಲದ ಪದಾಧಿಕಾರಿಗಳು, ಮಂಡಲದ ಪ್ರಮುಖರು, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಎಚ್ಚರಿಕೆ ನೀಡಿದ್ದ ಪೊಲೀಸರು: ಬಿಜೆಪಿ ಪ್ರತಿಭಟನೆಯ ಮಾಹಿತಿ ಪಡೆದ ಪೊಲೀಸರು, ಮೇ ೨೦ರಂದು ಬೆಳಗ್ಗೆ ಬೆಳ್ತಂಗಡಿ ಪೇಟೆಯಲ್ಲಿ ಧ್ವನಿವರ್ಧಕ ಮೂಲಕ ನೀತಿ ಸಂಹಿತೆಯ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು. ಯಾವುದೇ ಪ್ರತಿಭಟನೆಗಳಿಗೆ ಅವಕಾಶವಿಲ್ಲ ಎಂದು ಸೂಚನೆ ನೀಡಿದ್ದರು. ಬೆಳ್ತಂಗಡಿ ನಗರದಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

  • ನ್ಯಾಯಪರ ಹೋರಾಟ: ಪ್ರತಾಪಸಿಂಹ ನಾಯಕ್
  • ಅಧಿಕಾರಿಗಳು ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಿ: ಕೋಟ
  • ತಾರ್ಕಿಕ ಅಂತ್ಯದವರೆಗೆ ಹೋರಾಟ: ಕ್ಯಾ.ಬ್ರಿಜೇಶ್ ಚೌಟ
  • ಪೊಲೀಸ್ ಠಾಣೆ ಬಂದ್ ಮಾಡಿ: ಸತೀಶ್ ಕುಂಪಲ
  • ಎಫ್‌ಐಆರ್ ಹಿಂದೆ ಕಾಂಗ್ರೆಸ್ ಷಡ್ಯಂತ್ರ: ಹರಿಕೃಷ್ಣ ಬಂಟ್ವಾಳ್

ಪೊಲೀಸರ ಕಾಲರ್ ಹಿಡಿಯಲು ಸಿದ್ಧ: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಹೇಳಿಕೆ ನೀಡಿದ ಶಾಸಕ ಪೂಂಜ ವಿರುದ್ಧ ಪ್ರಕರಣ ದಾಖಲು:

ಬೆಳ್ತಂಗಡಿ: ಶಶಿರಾಜ್ ಶೆಟ್ಟಿ ಬಂಧನವನ್ನು ವಿರೋಧಿಸಿ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ ಪ್ರತಿಭಟನಾ ಸಭೆ ನಡೆಸಿ, ಪೊಲೀಸರಿಗೆ ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ.
ಪ್ರಕರಣವೊಂದರ ಆರೋಪಿತ ಹಾಗೂ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿರುವ ಶಶಿರಾಜ್ ಶೆಟ್ಟಿ ಎಂಬಾತನ ಬಂಧನ ವಿರೋಧಿಸಿ, ಮೇ ೨೦ರಂದು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ, ಕಾನೂನುಬಾಹಿರವಾಗಿ ಬೆಳ್ತಂಗಡಿ ವಿಕಾಸ ಸೌಧದ ಮುಂಭಾಗದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಮತ್ತು ಇತರರು, ಜನರನ್ನು ಗುಂಪು ಸೇರಿಸಿ ಪ್ರತಿಭಟನಾ ಸಭೆ ನಡೆಸಿರುತ್ತಾರೆ. ಸದ್ರಿ ಪ್ರತಿಭಟನಾ ಸಭೆಯಲ್ಲಿ, ಹರೀಶ್ ಪೂಂಜ, ಪ್ರಸ್ತುತ ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ, ಪೊಲೀಸರ ಕಾಲರ್ ಹಿಡಿಯಲು ಸಿದ್ಧನೆಂದು ಹಾಗೂ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಬೆದರಿಸಿ, ಸಾರ್ವಜನಿಕ ನೌಕರರಾದ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಮತ್ತು ಇತರೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿ, ಜೀವ ಬೆದರಿಕೆ ಒಡ್ಡಿರುತ್ತಾರೆ. ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: ೫೮/೨೦೨೪, ಕಲಂ:೧೪೩, ೧೪೭, ೩೪೧, ೫೦೪, ೫೦೬ ಜೊತೆಗೆ ೧೪೯ ಐ.ಪಿ.ಸಿ.ನಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯಪರ ಹೋರಾಟ: ಪ್ರತಾಪಸಿಂಹ ನಾಯಕ್
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಹೋರಾಟದಿಂದ ಬೆಳೆದು ಬಂದ ಪಕ್ಷ ಬಿಜೆಪಿ. ನಿರಪರಾಧಿಯ ಮೇಲೆ ಕೇಸು ದಾಖಲಿಸಿ ಮಧ್ಯರಾತ್ರಿ ಅರೆಸ್ಟ್ ಮಾಡುವ ಹೀನಾಯ ಕೃತ್ಯ ನಡೆದಿದೆ. ಇದು ಬಿಜೆಪಿಯ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ. ಆದರೆ ಪಕ್ಷ ಯಾವುದೇ ಷಡ್ಯಂತ್ರಗಳಿಗೆ ತಲೆಬಾಗುವುದಿಲ್ಲ. ಜನರಿಂದ ಆಯ್ಕೆಯಾದಂತಹ ಪ್ರತಿನಿಧಿ ನನ್ನ ಊರಿನ ಒಬ್ಬ ಹುಡುಗನಿಗೆ ಅನ್ಯಾಯವಾಗಿದೆ ಎಂದು ಕಳೆಂಜದಲ್ಲಿ ಮಾಡಿದಾಗ ಜನಪ್ರತಿನಿಧಿಯಾಗಿ ಪ್ರಶ್ನಿಸುವ ತಪ್ಪೆನೀದೆ? ಹೆದರುವ ಮಂದಿ ನಾವಲ್ಲ, ಎದುರಿಸುವ ಶಕ್ತಿ ಇದೆ. ಎಷ್ಟು ಬೇಕಾದರೂ ಎಫ್‌ಐಆರ್ ದಾಖಲಿಸಿ, ನಿಮ್ಮ ಪೇಪರ್ ಜಾಸ್ತಿಯೋ, ನಮ್ಮ ಕಾರ್ಯಕರ್ತರ ಶಕ್ತಿ ಹೆಚ್ಚೋ ಎಂದು ತೋರಿಸುತ್ತೇವೆ. ನ್ಯಾಯಪರ ಹೋರಾಟ ಮುಂದುವರಿಸುತ್ತೇವೆ. ವಿಧಾನಸೌಧಕ್ಕೆ ಹೋರಾಟದ ಧ್ವನಿಯನ್ನು ಕೊಂಡು ಹೋಗುತ್ತೇವೆ ಎಂದು ಹೇಳಿದರು.

ತಾರ್ಕಿಕ ಅಂತ್ಯದವರೆಗೆ ಹೋರಾಟ: ಕ್ಯಾ.ಬ್ರಿಜೇಶ್ ಚೌಟ: ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೆ, ಶಾಸಕರ ಮೇಲೆ ಹಾಕಿರುವ ಮೊಕದ್ದಮೆ ಹಾಗೂ ಕಾರ್ಯಕರ್ತನ ಬಿಡುಗಡೆಯಾಗುವ ತನಕ ನಮ್ಮ ಪಾರ್ಟಿ ಹೋರಾಟವನ್ನು ಜಿಲ್ಲೆ, ರಾಜ್ಯದಲ್ಲಿ ಕೈಗೊಳ್ಳುತ್ತದೆ. ನಮ್ಮ ಕಾರ್ಯಕರ್ತರು ಹೋರಾಟಕ್ಕೆ ಸದಾ ಸಿದ್ಧ. ಕಾಂಗ್ರೆಸ್ ಫೇಕ್ ಅಕೌಂಟ್ ಮುಖಾಂತರ ರಾಜಕಾರಣ ಮಾಡುವುದು ಎಂದಿದ್ದರೆ ಇಂದೇ ಅಂತ್ಯ ಹಾಡಿ. ಜನರ ಮಧ್ಯೆ ಇದ್ದು ನ್ಯಾಯ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಬೇಕು. ಎಲ್ಲ ಕಾರ್ಯಕರ್ತರೊಂದಿಗೆ ನಾನು ನಿರಂತರವಾಗಿ ಇರುತ್ತೇನೆ.
– ಬ್ರಿಜೇಶ್ ಚೌಟ, ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಎಫ್‌ಐಆರ್ ಹಿಂದೆ ಕಾಂಗ್ರೆಸ್ ಷಡ್ಯಂತ್ರ: ಹರಿಕೃಷ್ಣ ಬಂಟ್ವಾಳ್: ಕರ್ನಾಟಕದಲ್ಲಿ ಹೋರಾಟಕ್ಕೆ ಮೂಲ ಕ್ಷೇತ್ರವಾಗಿ ಬೆಳ್ತಂಗಡಿ ಎದ್ದು ನಿಲ್ಲುತ್ತಿದೆ. ಹರೀಶ್ ಪೂಂಜರನ್ನು ಬಂಧಿಸಬೇಕು ಎನ್ನುವ ಕಾಂಗ್ರೆಸ್‌ನವರ ಷಡ್ಯಂತ್ರ ಈ ಎಫ್‌ಐಆರ್ ಹಿಂದೆ ಇದೆ. ಆದರೆ ಕಾಂಗ್ರೆಸ್ಸಿನವರೇ, ಹರೀಶ್ ಪೂಂಜರ ರೋಮವನ್ನು ಜನ್ಮದಲ್ಲಿ ತೆಗೆಯಲು ಸಾಧ್ಯವಿಲ್ಲ. ಚರಿತ್ರೆಯಲ್ಲಿ ಇದೇ ಮೊದಲು ತಾಲೂಕು ಆಫೀಸ್ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಾಗಿದೆ. ಪಾಕಿಸ್ತಾನ್ ಜಿಂದಾಬಾದ್ ಹೇಳಿದರೂ ಬಂಧಿಸುವ ಧೈರ್ಯ ಖಾಕಿಗೆ ಯಾಕೆ ಇಲ್ಲ? ಪೊಲೀಸರು ಕಾಂಗ್ರೆಸ್ಸಿಗರಾಗಬೇಡಿ. ಜೂನ್ ೪ರಂದು ಕಾಂಗ್ರೆಸ್ ಧೂಳಿಪಟವಾಗುತ್ತದೆ. ಇಂದಿನ ಹೋರಾಟ ಟ್ರೇಲರ್, ಸಿನಿಮಾ ಇನ್ನೂ ಬಾಕಿಯಿದೆ.
– ಹರಿಕೃಷ್ಣ ಬಂಟ್ವಾಳ, ಬಿಜೆಪಿ ಮುಖಂಡ

ಅಧಿಕಾರಿಗಳು ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಿ: ಕೋಟ: ಅಮಾಯಕ ಕಾರ್ಯಕರ್ತನ ಮೇಲೆ ಹಾಗೂ ಶಾಸಕರ ಹರೀಶ್ ಪೂಂಜರ ವಿರುದ್ಧ ಪೊಲೀಸರು ಸುಳ್ಳು ಕೇಸು ದಾಖಲಿಸಿರುವುದು ಖಂಡನೀಯ. ಈ ಕೇಸನ್ನು ವಾಪಸ್ ಪಡೆಯದಿದ್ದರೆ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ನ್ಯಾಯ ಕೇಳಿದವರ ವಿರುದ್ಧ ಪ್ರಕರಣ ದಾಖಲಿಸುವ ಪರಂಪರೆ ಇದುವರೆಗೆ ಕಂಡಿಲ್ಲ. ಸರಕಾರಿ ಅಧಿಕಾರಿಗಳು ಯಾವುದೇ ಪಕ್ಷದ ಹಿಂದೆ ಹೋಗದೆ ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯ ಇದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕಾನೂನು ಎಲ್ಲರಿಗೂ ಒಂದೇ. ನ್ಯಾಯ ಕೇಳಿದ ಪೂಂಜರ ಮೇಲೆ ಕೇಸ್ ದಾಖಲು ಆಗುತ್ತದೆ. ಆದರೆ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದವರ ಮೇಲೆ ಕೇಸ್ ಆಗಲ್ಲ. ಕಾಂಗ್ರೆಸ್ ಸರಕಾರ ಕರ್ನಾಟಕವನ್ನು ಜೈಲಾಗಿ ಪರಿವರ್ತಿಸಲು ಮುಂದಾಗಿದೆ. ಎಲ್ಲರಿಗೂ ನ್ಯಾಯ ಒಂದೇ ರೀತಿ ಇರಬೇಕು. ಸಂವಿಧಾನಕ್ಕೆ ಅಪಚಾರ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಮುಂದಿನ ೨೪ ಗಂಟೆಗಳ ಒಳಗೆ ಶಶಿರಾಜ್ ಮೇಲಿನ ಕೇಸನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಈ ಹೋರಾಟ ವಿಧಾನಸೌಧಕ್ಕೆ ಶಿಫ್ಟ್ ಆಗುತ್ತದೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ತನಕ ಶಾಸಕ ಹರೀಶ್ ಪೂಂಜರಿಗೆ ಬೆಂಬಲಕ್ಕೆ ನಿಲ್ಲುತ್ತೇವೆ. ನ್ಯಾಯ ದೊರಕುವ ತನಕ ಭಾಜಪಾದ ಬೆಂಬಲವಿದೆ ಎಂದು ಹೇಳಿದರು.

ಪೊಲೀಸ್ ಠಾಣೆ ಬಂದ್ ಮಾಡಿ: ಸತೀಶ್ ಕುಂಪಲ
ಬೆಳ್ತಂಗಡಿ ಯುವಮೋರ್ಚಾ ಅಧ್ಯಕ್ಷನನ್ನು ಏಕಾಏಕಿ ಬಂಧಿಸಿದಾಗ ನ್ಯಾಯ ಕೇಳಲು ಪೂಂಜರು ಠಾಣೆಗೆ ತೆರಳಿದರೆ ಅವರ ಮೇಲೆ ಕೇಸ್ ಹಾಕುವುದಾದರೆ ಠಾಣೆಯನ್ನು ಬಂದ್ ಮಾಡಿ. ಹರೀಶ್ ಪೂಂಜರು ಶಾಸಕರಾಗಿರುವಾಗ, ಬಿಜೆಪಿ ಸರಕಾರ ಅಧಿಕಾರದಲ್ಲಿರುವಾಗ ದ್ವೇಷದ ರಾಜಕಾರಣ ಮಾಡಿಲ್ಲ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ಸಿನವರ ಹಾಗೂ ಅಧಿಕಾರಿಗಳ ಬೆವರು ಇಳಿಸುವ ಕಾರ್ಯ ಬಿಜೆಪಿ ಮಾಡುತ್ತದೆ. ಶಾಸಕರ ಮೇಲೆ ಕೇಸು ಹಾಕುವ ಮೂಲಕ ದ್ವೇಷ ರಾಜಕಾರಣ ಮಾಡುವ ರಾಜಕಾರಣದಲ್ಲಿ ನಮ್ಮನ್ನು ಸೋಲಿಸುವುದು ಮೂರ್ಖತನ. ಕಾರ್ಯಕರ್ತರ ಮೇಲೆ ಸವಾರಿ ಮಾಡುವುದನ್ನು ನಿಲ್ಲಿಸಿ. ಬೆಳ್ತಂಗಡಿಯ ಕಾರ್ಯಕರ್ತರೊಂದಿಗೆ ಜಿಲ್ಲೆ ನಿಲ್ಲಲಿದೆ. ನ್ಯಾಯ ಸಿಗದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟ ಕೈಗೊಳ್ಳಲಾಗುವುದು. -ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷ

ಎಸ್ಪಿನ ಮಂಡೆಡ್ ಸುವಿ ಇಜ್ಜಿ, ಬೊಂಡುಲ ಇಜ್ಜಿ, ಪೊಲೀಸೆರೆನ ಕಾಲರ್ ಪತ್ತೆರೆಲ ರೆಡಿ: ಹರೀಶ್ ಪೂಂಜ
ಜಿಲ್ಲಾ ಎಸ್ಪಿನ ಮಂಡೆಡ್ ಸುವಿ ಇಜ್ಜಿ, ಬೊಂಡುಲ ಇಜ್ಜಿ. ಯಾನ್ ಕುಜಲ್ ಮಾತ್ರ ಇಜ್ಜಿ ಪಂದ್ ಎನ್ನ್‌ದಿತ್ತೆ. ಬೊಂಡುಲ ಇಜ್ಜಿ. ಎಂಕ್ಲೆನ ಕಾರ್ಯಕರ್ತಗ್ ಅನ್ಯಾಯ ಆನಗ ಫೋನ್ ಮಲ್ತಂಡ ಸುಬ್ರಪುರ್ ಮಠ ಫೋನ್ ದೆಪ್ಪುಜೆರ್. ತಹಸೀಲ್ದಾರ್‌ನ ಸ್ವಿಚ್ಡ್ ಆಫ್. ಎಸ್ಪಿಯವರು ನಿಯತ್ತಾಗಿರಬಹುದು ಎಂದು ಅವರಿಗೆ ಕರೆ ಮಾಡಿದರೆ, ಬೆಳಗ್ಗಿನವರೆಗೆ ಫೋನ್ ತೆಗೆಯುವುದಿಲ್ಲ. ಎಸ್ಪಿಯವರೇ, ನೀವೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ನಿಮಗೆ ಓರ್ವ ಶಾಸಕ, ಜನಪ್ರತಿನಿಧಿ ಫೋನ್ ಮಾಡಿದಾಗ ರಿಸೀವ್ ಮಾಡುವುದಿಲ್ಲ ಎಂದಾದರೆ ನೀವು ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದು ನಾನು ಹೇಳುತ್ತೇನೆ. ಎಂಎಲ್‌ಎ ಹೋಗಿ ಸ್ಟೇಷನ್‌ನಲ್ಲಿ ಗದರಿಸಿದ್ರು ಅಂತ ಎಸ್ಪಿ ಹೇಳುತ್ತಾರಂತೆ. ಅಲ್ಲ ಸ್ವಾಮಿ, ನಾನು ಅಡಿಕೆ, ವೀಳ್ಯ ಹಾಕಿ ಸುಖ-ಕಷ್ಟ ಮಾತನಾಡಲು ನಿಮ್ಮಲ್ಲಿಗೆ ಬಂದಿದ್ದಾ? ನಾನು ಮದುವೆಯ ಮಾತುಕತೆ ಮಾಡಲು ಬಂದಿದ್ದಾ ನಿಮ್ಮಲ್ಲಿಗೆ? ಕಾರ್ಯಕರ್ತರಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂಬ ಆಕ್ರೋಶದಲ್ಲಿ ಬಂದಿದ್ದೆ. ನಾನು ಆಕ್ರೋಶದಿಂದ, ಅಧಿಕಾರಯುತವಾಗಿಯೇ ಮಾತನಾಡುವುದು. ಅನ್ಯಾಯವಾದಾಗ ಹೀಗೆಯೇ ಮಾತನಾಡುವೆ. ಬೆಳ್ತಂಗಡಿಯ ಕಾರ್ಯಕರ್ತರನ್ನು ಮುಟ್ಟಿದರೆ ಕಾಲರ್ ಹಿಡಿದು ಎಳೆದು ಹಾಕಲೂ ರೆಡಿ ಇzನೆ. ಬಿಜೆಪಿ ಕಾರ್ಯಕರ್ತರ ಪರವಾಗಿ, ಬೆಳ್ತಂಗಡಿ ತಾಲೂಕಿನ ಮತದಾರರಿಗೆ ಅನ್ಯಾಯವಾದಾಗ ನಾನು ಜೈಲಿನಲ್ಲಿ ಕುಳಿತುಕೊಳ್ಳಲೂ ಸಿದ್ಧನಿzನೆ. ಪೊಲೀಸರ ಕಾಲರ್ ಹಿಡಿಯಲೂ ನಾನು ರೆಡಿ ಇzನೆ.
– ಹರೀಶ್ ಪೂಂಜ, ಶಾಸಕ
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ಬ್ಯಾರಿಗಳು
ಮಾಡಿದ ಹಾಗೆ ಬೆಳ್ತಂಗಡಿಯಲ್ಲಿ ಮಾಡ್ತೇವೆ
ಕೋಡೆ ಚಂದ್ರಣ್ಣ ಪನ್ತೆರ್, ಬೂಡುಜೆರ್ಂಡ ಆನಿ ಬ್ಯಾರಿಲು ಡಿ.ಜೆ ಹಳ್ಳಿ- ಕೆ.ಜಿ. ಹಳ್ಳಿ ಎಂಚ ಮಾಲ್ತೆರಾ, ಅಯಿನ್ ಬೆಳ್ತಂಗಡಿಡ್ ಸ್ಯಾಂಪಲ್ ಹಿಂದೂಳು ತೋಜಿಪಾಗಂದ್ ಪನ್ತೆರ್. ಪ್ರಾಯಶಃ ನನ ದುಂಬುಗ್ ಸುಬ್ರಪುರ್ ಮಠ್‌ರೇ, ಪೃಥ್ವಿ ಸಾನಿಕಂರೇ, ಬಿಜೆಪಿದ ಕಾರ್ಯಕರ್ತೆರ್‌ನ ಮಿತ್ತ್ ಈ ರೀತಿದ ಸಾಹಸ್ ಮಲ್ಪರ ಪೊಯರ್ಂಡ ಬೆಳ್ತಂಗಡಿದ ಭಾರತೀಯ ಜನತಾ ಪಾರ್ಟಿ ಆನಿ ಬ್ಯಾರಿಲು ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿಡ್ ಮಲ್ತೆರಾ, ಅವ್ವೇ ಸ್ಥಿತಿನ್ ಬೆಳ್ತಂಗಡಿಡ್ ನಿರ್ಮಾಣ ಮಲ್ಪುನ. ಅಂಚಿನ ಕೆಲಸನ್ ಎಂಕ್ಲ ಖಂಡಿತವಾದ್ಲ ಮಲ್ಪುವ ಎಂದು ಹರೀಶ್ ಪೂಂಜ ಹೇಳಿದರು.

ಬಂಗೇರರು ಬ್ಯಾವರ್ಸಿ ಅಂದ್ರೂ ಕೇಸ್ ಆಗಲ್ಲ,
ನಾನು ಮಾತನಾಡಿದ್ದಕ್ಕೆ ಎಫ್‌ಐಆರ್ ಯಾಕೆ?:
ದಿವಂಗತ ಮಾಜಿ ಶಾಸಕ ವಸಂತ ಬಂಗೇರರು, ಆಯೆ ಬ್ಯಾವರ್ಸಿ ಸರ್ಕಲ್ ಇನ್‌ಸ್ಪೆಕ್ಟರ್, ನಾಯ್ದ ಮಗೆ ತಹಶೀಲ್ದಾರ್, ಆಯನಾ ತರೆ ಕಡ್ಪೊಡು ಎಂದು ಹೇಳಿದರೆ ಎಫ್‌ಐಆರ್ ಆಗುವುದಿಲ್ಲ. ಆದರೆ ನಾನು ಸ್ಟೇಷನ್ ನಿಮ್ಮ ಅಪ್ಪನದ್ದು ಎಂದು ಕೇಳಿದರೆ ಎಫ್‌ಐಆರ್ ಆಗುತ್ತದೆ. ಹಾಗಾದರೆ ಅಂದು ವಸಂತ ಬಂಗೇರರು ಹೇಳಿದ ಬ್ಯಾವರ್ಸಿ, ನಾಯ್ದ ಮಗ, ಸೂಳೆ ಮಗ ಹೇಳಿದ್ದನ್ನು ಪೊಲೀಸರು ಒಪ್ಪಿಕೊಂಡಾಯ್ತು. ಒಪ್ಪಿಕೊಳ್ಳುವಂತೆ ಮಾಡಿದ ವಸಂತ ಬಂಗೇರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಪೂಂಜ ಹೇಳಿದರು.

LEAVE A REPLY

Please enter your comment!
Please enter your name here