ಬೆಳ್ತಂಗಡಿ ಭಾರತೀಯ ಜೈನ್ ಮಿಲನ್ ಶಾಖೆಯ ಮಾಸಿಕ ಸಭೆ- ಸಮಾಜದ ಅಭಿವೃದ್ಧಿಗೆ ಸಂಘಟನೆ ಮುಖ್ಯ: ಬಿ.ಸೋಮಶೇಖರ ಶೆಟ್ಟಿ

0

ಉಜಿರೆ: ಬೆಳ್ತಂಗಡಿ ಭಾರತೀಯ ಜೈನ್ ಮಿಲನ್ ಶಾಖೆಯ ಮಾಸಿಕ ಸಭೆಯು ಇತ್ತೀಚೆಗೆ ಉಜಿರೆಯಲ್ಲಿ ಮಿಲನ್ ಅಧ್ಯಕ್ಷ ವೀರ್ ಡಾಕ್ಟರ್ ನವೀನ್ ಕುಮಾರ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.ಜೈನ್ ಮಿಲನ್ ನ ಕಾರ್ಯ ಕ್ರಮಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸವಿವರವಾಗಿ ಅಧ್ಯಕ್ಷರು ವಿವರಿಸಿ ತಿಳಿಸಿದರು.ವೀರ್ ಭುಜಬಲಿಯವರು ಯಶಸ್ವಿ ಮಾಸಿಕ ಸಭೆ ನಡೆಸುವ ಬಗ್ಗೆ ಸಲಹೆ ನೀಡಿದರು.

ಧೀಮಹಿ ಮಹಿಳಾ ಸಮಾಜದ ಅಧ್ಯಕ್ಷೆ ವೀರಾಂಗನ ಡಾಕ್ಟರ್ ರಜತ ಅವರು ಮಾತನಾಡಿ ತಿಂಗಳಿಗೆ ಒಂದು ಸಲ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಇಂತಹ ಸಭೆಗಳಿಂದ ಅವಕಾಶ ದೊರೆಯುತ್ತದೆ ಮತ್ತು ಇದನ್ನು ಎಲ್ಲಾ ಸದಸ್ಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮಿಲನ್ ನಿರ್ದೇಶಕ ವೀರ್ ಬಿ. ಸೋಮ ಶೇಖರ ಶೆಟ್ಟಿ ಅವರು ಮಾತನಾಡಿ ಮಿಲನ್ ಸಂಘ ಟ ನೆಯ ಮಹತ್ವ ಹಾಗೂ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಸಂಘಟನೆ ಬಲಗೊಳಿಸುವಲ್ಲಿ ಸದಸ್ಯರ ದಕಾರವನ್ನು ಕೋರಿದರು.ವೇದಿಕೆಯಲ್ಲಿ ವೀರ್ ಮುನಿರಾಜ ಅಜ್ರಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ವೀರ್ ಸಂಪತ್ ಕುಮಾರ್ ಕಾರ್ಯ ಕ್ರಮ ನಿರ್ವಹಿಸಿದರು.ವೀರ್ ನಿಖಿತ್ ವಂದಿಸಿದರು.

LEAVE A REPLY

Please enter your comment!
Please enter your name here