ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ ಟೊಯೋಟೊ ನೇಮಕಾತಿ ಶಿಬಿರ

0

ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ ಪ್ರಖ್ಯಾತ ಟೊಯೋಟಾ ಸಂಸ್ಥೆಯವರು ಎರಡು ದಿನಗಳ ನೇಮಕಾತಿ ಶಿಬಿರವನ್ನು ನಡೆಸಿದ್ದು, ವೇಣೂರು ಐಟಿಐ ಮತ್ತು ಆಸುಪಾಸಿನ ಕೆಲವು ಐಟಿಐಗಳ ವಿದ್ಯಾರ್ಥಿಗಳ ಸಹಿತ ಒಟ್ಟು 273 ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುತ್ತಾರೆ.

ಬರಹ ಪರೀಕ್ಷೆ, ಮೌಖಿಕ ಸಂದರ್ಶನ, ದೈಹಿಕ ಆರೋಗ್ಯ ಪರೀಕ್ಷೆ ಮುಂತಾದ ಮೂರು ಹಂತಗಳಲ್ಲಿ ಆಯ್ಕೆ ನಡೆಸಲಾಯಿತು.

ಟೊಯೋಟಾ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ದಯಾನಂದ ಆರ್., ರೋಷನ್, ರುದ್ರ ಅವರಲ್ಲದೇ ತಾಂತ್ರಿಕ ಪರಿಣಿತರನ್ನೊಳಗೊಂಡ ಇನ್ನಿತರ ಅಧಿಕಾರಿಗಳು ಆಯ್ಕೆ ಶಿಬಿರವನ್ನು ನಡೆಸಿದರು.

ದಯಾನಂದ್ ಆರ್. ರವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಆಧುನಿಕ ಜಗತ್ತಿನಲ್ಲಿ ತಾಂತ್ರಿಕ ಕೌಶಲ್ಯಕ್ಕೆ ವಿಪರೀತ ಬೇಡಿಕೆಗಳಿದ್ದು, ತಾಂತ್ರಿಕ ಕೌಶಲ್ಯವನ್ನು ಹೊಂದಿರುವ ಯಾವುದೇ ವ್ಯಕ್ತಿಗೆ ಉತ್ತಮ ಭವಿಷ್ಯವಿದೆ.

ಕಂಪನಿಗಳಲ್ಲಿ ಇದೀಗ ಮಹಿಳೆಯರನ್ನು ನೇಮಕಾತಿ ಮಾಡುತ್ತಿದ್ದು, ಐಟಿಐ ಕಲಿತ ಮಹಿಳೆಯರಿಗೆ ಕೂಡಲೇ ಬಹುರಾಷ್ಟ್ರೀಯ ಕಂಪನಿಗಳಲ್ಲಿ ನೌಕರಿ ಸಿಗುವುದು ನಿಶ್ಚಿತ ಎಂದು ತಿಳಿಸಿದರು.

ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್  ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವೇಣೂರಿನ ಎಸ್.ಡಿ.ಎಂ. ಐಟಿಐ ಮಾತ್ರವಲ್ಲದೆ ಆಸುಪಾಸಿನ ಏಳು ಐಟಿಐ ಸಂಸ್ಥೆಗಳಿಂದ ನೇಮಕಾತಿ ಶಿಬಿರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

p>

LEAVE A REPLY

Please enter your comment!
Please enter your name here