ಉಜಿರೆ: ಉಜಿರೆ ಪಾರದಲ್ಲಿ ಮೇ 11ರಂದು ಕಲ್ಕುಡ ಮತ್ತು ಕಲ್ಲುರ್ಟಿ ದೈವಸ್ಥಾನದಲ್ಲಿ ಶರತ್ ಕೃಷ್ಣ ಪಡುವೆಟ್ನಾಯ ಇವರ ಮಾರ್ಗದರ್ಶನದಲ್ಲಿ ಸಭೆ ನಡೆಯಿತು.
ಸದ್ರಿ ಸಭೆಯಲ್ಲಿ ಮೊನ್ನೆ ನಡೆದ ವಾರ್ಷಿಕ ನೇಮೋತ್ಸವದ ಖರ್ಚು ವೆಚ್ಚ ಮಂಡನೆ ಹಾಗು ದೈವಗಳಿಗೆ ವಾರ್ಷಿಕ ಅಗೇಲು ಸೇವೆ ನೀಡುವ ಬಗ್ಗೆ ಚರ್ಚಿಸಲಾಯಿತು.
ನಂತರ ಮುಂದಿನ 3 ವರ್ಷಗಳ ಅವಧಿವರೆಗೆ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವ ಅಧ್ಯಕ್ಷರಾಗಿ ಶರತ್ ಕೃಷ್ಣ ಪಡುವೆಟ್ನಾಯ, ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಪಾರ, ಕಾರ್ಯದರ್ಶಿಯಾಗಿ ಚಂದ್ರನಾಯ್ಕ, ಕೋಶಾಧಿಕಾರಿಯಾಗಿ ಬಾಲಕೃಷ್ಣ ನಾಯ್ಕ ಅತ್ತಾಜೆ, ಉಪಾಧ್ಯಕ್ಷರಾಗಿ ವಾಸು ಪೂಜಾರಿ ಪಾರ, ತಿಮ್ಮಯ್ಯ ನಾಯ್ಕ ಪಾರ, ದೇಜಪ್ಪಪೂಜಾರಿ, ಜಯರಾಮ ನಾಯ್ಕ, ಮನು, ಜಯಂತ ನಾಯ್ಕ ರನ್ನು ನೇಮಿಸಲಾಯಿತು.
p>