ಪೆರ್ಲ: ಬೈಪಾಡಿ ಸರ್ಕಾರಿ ಪ್ರೌಢ ಶಾಲೆಗೆ ಶೇ.100 ಫಲಿತಾಂಶ

0

ಪೆರ್ಲ: 2024ನೇ ಸಾಲಿನ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿ ಸತತ 5ನೇ ಸಲವೂ 100% ಫಲಿತಾಂಶ ಪಡೆದಿದೆ.

ಕಳೆದ 5 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ 100% ಫಲಿತಾಂಶ ಪಡೆದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಏಕೈಕ ಪ್ರೌಢ ಶಾಲೆ ಪೆರ್ಲ ಬೈಪಾಡಿ ಶಾಲೆಯಾಗಿದೆ.

ಒಟ್ಟು ಪರೀಕ್ಷೆ ಬರೆದ 41 ವಿದ್ಯಾರ್ಥಿಗಳಲ್ಲಿ 41 ಉತ್ತೀರ್ಣರಾದರು.

10 ಉನ್ನತ ಶ್ರೇಣಿ, 25 ಪ್ರಥಮ, 5 ದ್ವಿತೀಯ ,1 ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾದರು.

ಉತ್ತಮ ಫಲಿತಾಂಶ ಪಡೆದ ಶಾಲೆಯನ್ನು ಎಸ್.ಡಿ.ಎಂ.ಸಿ. ಮತ್ತು ಊರವರು ಅಭಿನಂದನೆ ಸಲ್ಲಿಸಿದರು.

ಬಂದಾರು ಗ್ರಾಮದ ಕೊಡಿನೆಕ್ಕಿಲು ನಿವಾಸಿ ಭಾಸ್ಕರ ಗೌಡ ಮತ್ತು ಚಂದ್ರಕಲಾ ದಂಪತಿಗಳ ಸುಪುತ್ರ.

LEAVE A REPLY

Please enter your comment!
Please enter your name here