ನಿವೃತ್ತ ಬಿ.ಎಸ್.ಎಫ್. ಯೋಧ ಬೆಳ್ತಂಗಡಿಯ ಗಣೇಶ್ ರವರಿಗೆ ತಾಯಿನಾಡಿನಲ್ಲಿ ಭವ್ಯ ಸ್ವಾಗತ

0

ಬೆಳ್ತಂಗಡಿ: ಭಾರತೀಯ ಗಡಿ ಭದ್ರತಾ ಪಡೆ(ಬಿ.ಎಸ್.ಎಫ್)ಯಲ್ಲಿ 21 ವರ್ಷ ಸೇವೆ ಸಲ್ಲಿಸಿರುವ ಬೆಳ್ತಂಗಡಿಯ ಗಣೇಶ್ ಬಿ.ಎಲ್. ಇವರು ಮೇ 2ರಂದು ನಿವೃತ್ತಿಯಾಗುತ್ತಿದ್ದು, ಮೇ 4ರಂದು ಹುಟ್ಟೂರಿಗೆ ಆಗಮಿಸಿದರು.

ಈ ಸಂದರ್ಭದಲ್ಲಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದಿಂದ ಮೆರವಣಿಗೆ ಮೂಲಕ ಅವರ ಲಾಯಿಲ ಮನೆಗೆ ಆಗಮಿಸಿದರು.ಇದರ ಅಂಗವಾಗಿ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮರಾಟಿ ಸೇವಾ ಸಂಘದ ಉಮೇಶ್ ಕೇಲ್ದಡ್ಕ, ಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಲಯದ ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಇಳಂತಿಲ, ಇವರ ಸೇವೆ ಬಗ್ಗೆ ಮಾತನಾಡಿ ಶುಭ ಕೋರಿದರು.

ನಿವೃತ್ತ ಯೋಧ ಗಣೇಶ್ ಬಿ.ಎಲ್ ಮಾತನಾಡಿ ಸೈನಿಕರಿಗೆ ನೀಡಿರುವ ಇಂತಹ ಗೌರವಕ್ಕೆ ಅಭಾರಿಯಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ನವೀನ್ ಬಿ.ಕೆ, ನೋಟರಿ ವಕೀಲ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಬಿ.ಎಲ್, ಪದಾಧಿಕಾರಿಗಳು ಮತ್ತು ವಕೀಲರು, ಮರಾಟಿ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಕುಟುಂಬ ವರ್ಗದವರು, ನಾಗರಿಕರು ಉಪಸ್ಥಿತರಿದ್ದು ಶುಭ ಕೋರಿದರು.

ಮರಾಟಿ ಸೇವಾ ಸಂಘದ ಕ್ರೀಡಾ ಕಾರ್ಯದರ್ಶಿ ರವಿ ನಾಯ್ಕ್ ಬಡಕೊಡಿ ಕಾರ್ಯಕ್ರಮ ನಿರೂಪಿಸಿದರು.

ಗಣೇಶ್ 2002ರ ಡಿ.5ರಂದು ಬಿ.ಎಸ್.ಎಫ್.ಗೆ ಸೈನಿಕನಾಗಿ ಸೇರ್ಪಡೆಗೊಂಡು, ಭಾರತ-ಪಾಕಿಸ್ತಾನ ಗಡಿ ಪ್ರದೇಶವಾದ ಪಂಜಾಬ್, ರಾಜಸ್ಥಾನ, ಅಸ್ಸಾಂ, ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಿ, ನಂತರ ಉತ್ತರ ಪ್ರದೇಶ, ಮಣಿಪುರ, ದೆಹಲಿ ಮತ್ತು ಬೆಂಗಳೂರಿನಲ್ಲೂ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಭಾರತೀಯ ಗಡಿ ಭದ್ರತಾ ಪಡೆಯ ಸಿಗ್ನಲ್ ಟ್ರೈನಿ ಸ್ಕೂಲ್‌ನಲ್ಲಿ ಹವಲ್ದಾರ್ ಇನ್‌ಸ್ಟ್ರಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಪಂಜಾಬ್‌ನಲ್ಲಿ ನಿವೃತ್ತಿ ಪಡೆದರು.

ಲಾಯಿಲ ಗ್ರಾಮದ ಬಿ.ಕೃಷ್ಣಪ್ಪ ನಾಯ್ಕ್ – ವಾರಿಜಾ ಕೆ. ನಾಯ್ಕ್ ದಂಪತಿಯ ಪುತ್ರ ಗಣೇಶ್ ಇವರು ಕರ್ನೋಡಿ ಸ.ಹಿ.ಪ್ರಾ. ಶಾಲೆ, ಬೆಳ್ತಂಗಡಿಯ ಚರ್ಚ್ ಹಿ.ಪ್ರಾ. ಶಾಲೆ, ಸಂತ ತೆರೆಸಾ ಪ್ರೌಢಶಾಲೆಯಲ್ಲಿ ಓದಿದ್ದು, ಮಂಗಳೂರಿನ ಕೆಪಿಟಿಯಲ್ಲಿ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಡಿಪ್ಲೋಮಾ ಪದವಿ ಪಡೆದಿದ್ದರು.

p>

LEAVE A REPLY

Please enter your comment!
Please enter your name here