ಕೊಲ್ಲಿ ಶ್ರಿ ದುರ್ಗಾಪರಮೇಶ್ವರೀ (ಶ್ರೀ ದುರ್ಗಾದೇವಿ) ದೇವಸ್ಥಾನದಲ್ಲಿ ಶ್ರೀ ಮಜ್ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿಯವರ ಭೇಟಿ- ಶ್ರೀ ಭಾರತೀತೀರ್ಥ ಯಜ್ಙಮಂಟಪದಲ್ಲಿ ಚಂಡಿಕಾಹೋಮ, ಸ್ವಾಮಿಯವರ ಆಶೀರ್ವಚನ ಕಾರ್ಯಕ್ರಮ

0

ಮಿತ್ತಬಾಗಿಲು: ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥಮಹಾಸ್ವಾಮಿ ಪರಮಾನುಗ್ರಹಪುರಸ್ಸರ ಆಶೀರ್ವಾದಗಳಿಂದ ತತ್ತರ ಕಮಲ ಸಂಜತರಾದ ಶ್ರೀ ಮಜ್ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿರವರು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನದಲ್ಲಿ ಶ್ರೀ ಭಾರತೀತೀರ್ಥ ಯಜ್ಙಮಂಟಪದಲ್ಲಿ ಚಂಡಿಕಾಹೋಮ ಮತ್ತು ಸ್ವಾಮಿಯವರ ಆಶೀರ್ವಚನ ಕಾರ್ಯಕ್ರಮವು ಎ.30ರಂದು ನೆಡೆಯಿತು.

ಬೆಳಿಗ್ಗೆ ಶ್ರೀ ಚಂಡಿಕಾ ಹೋಮ, ಶ್ರೀ ಜಗದ್ಗುರುಗಳ ಆಗಮನ, ಸ್ವಾಗತ, ಮೆರವಣಿಗೆ, ಚಂಡಿಕಾ ಹೋಮದ ಪೂರ್ಣಾಹುತಿ, ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಶ್ರೀ ಜಗದ್ಗುತುಗಳಿಂದ ಪ್ರಸನ್ನಪೂಜೆ, ಕ್ಷೇತ್ರದರ್ಶನ, ಧೂಳಿ ಪಾದಪೂಜೆ, ಫಲಸಮರ್ಪಣೆ, ಪಾದಪೂಜಾ-ಭಿಕ್ಷಾವಂದನೆ ಸೇವೆಗಳು, ಸಮಸ್ತ ಭಕ್ತಜನರಿಗೆ ಶ್ರೀ ಜಗದ್ಗುತುಗಳಿಂದ ಫಲಮಂತ್ರಾಕ್ಷತೆಯು ನಡೆಯಿತು.

ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿಕೆ ಧನಂಜಯ ರಾವ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಬಿಕೆ ಲೋಕೇಶ್ ರಾವ್, ಬ್ರಹ್ಮ ಕಲಶೋತ್ಸವದ ಸಮಿತಿಯ ಪ್ರಧಾನ ಕಾರ್ಯದರ್ಶಿ ದಾಸಪ್ಪಗೌಡ ಕಾಂಜಾನು, ಪ್ರಧಾನ ಸಂಘಟನಾ ಕಾರ್ಯದರ್ಶಿ ವಿನಯ ಚಂದ್ರ ಸೇನರಬೆಟ್ಟು, ಆಡಳಿತ ಅಧಿಕಾರಿ ಮೋಹನ್ ಬಂಗೇರ, ಕೋಶಾಧಿಕಾರಿ ವಾಸುದೇವ ರಾವ್ ಕಕ್ಕೆನೇಜಿ, ಜೀರ್ಣೋದ್ಧಾರ ಮಹಿಳಾ ಸಮಿತಿಯ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಕಿಲ್ಲೂರು, ಮಂಜುನಾಥ್ ಕಾಮತ್, ಶೃಂಗೇರಿ ಆಡಳಿತ ಅಧಿಕಾರಿ ಮುರುಳಿ , ವಾಗೀಶ್ ಶಾಸ್ತ್ರಿ, ಸತ್ಯಶಂಕರ ಹೊಳ್ಳ ಹಾಗೂ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

ಕಾರ್ಯವನ್ನು ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here