ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೇರ್ ವಿತರಣೆ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಉಜಿರೆ ವಲಯದ ಬೆಳಾಲು ಕಾರ್ಯಕ್ಷೇತ್ರದ ಪ್ರತಿಭಾ ಸಂಘದ ಕವಿತಾ ರವರ ಅತ್ತೆಗೆ ನಡೆದಾಡಲು ಆಗದೇ ಇದ್ದು ಸದ್ರಿ ಯವರ ಬೇಡಿಕೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿಶೇಷವಾಗಿ ಡಾ.ಡಿ.ವೀರೇಂದ್ರ ಹೆಗ್ಗೆಡೆಯವರು ವೀಲ್ ಚೇರ್ ಮಂಜೂರು ಮಾಡಿರುತ್ತಾರೆ.

ಸದ್ರಿ ಸಲಕರಣೆಯನ್ನು ತಾಲ್ಲೂಕು ಯೋಜನಾಧಿಕಾರಿಯವರಾದ ಸುರೇಂದ್ರ ಮತ್ತು ಬೆಳಾಲು ಒಕ್ಕೂಟದ ಉಪಾಧ್ಯಕ್ಷ ಪ್ರಸಾದ್ ರವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮನೆಯ ಸದಸ್ಯರಾದ ಸೀತಾಮ್ಮ ರವರ ಮಗ ರೋಹಿತಾಶ್ವ, ಸವಿತಾ, ವಲಯ ಮೇಲ್ವಿಚಾರಕಿ ವನಿತ ಹಾಗೂ ಮಾಯಾ ಸೇವಾಪ್ರತಿನಿಧಿ ಪ್ರಭಾ, ಬೆಳಾಲು ಸೇವಾಪ್ರತಿನಿಧಿ ತಾರಾನಾಥ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here