ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮರುಮೌಲ್ಯಮಾಪನದಲ್ಲಿ ವಾಣಿ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಕೌಸರ್ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ 7ನೇ ಸ್ಥಾನ

0

ಬೆಳ್ತಂಗಡಿ: ಮಾರ್ಚ್‌ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ಫಲಿತಾಂಶ ಪ್ರಕಟಗೊಂಡ ನಂತರ ನಡೆದ ಮರು ಮೌಲ್ಯಮಾಪನದಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಕೌಸರ್ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಮತ್ತು ಬೆಳ್ತಂಗಡಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.

ಫಲಿತಾಂಶ ಪ್ರಕಟಗೊಂಡಾಗ 587 ಅಂಕ ಗಳಿಸಿದ್ದ ಮುಸ್ಕಾನ್ ಕೌಸರ್ ವ್ಯವಹಾರ ಅಧ್ಯಯನ ವಿಷಯದ ಮರು ಮೌಲ್ಯಮಾಪನದ ಬಳಿಕ ನಾಲ್ಕು ಅಂಕಗಳ ಹೆಚ್ಚಳದೊಂದಿಗೆ 591 ಅಂಕಗಳನ್ನು ಗಳಿಸಿರುತ್ತಾರೆ.

LEAVE A REPLY

Please enter your comment!
Please enter your name here