ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

0

ಬೆಳ್ತಂಗಡಿ: ಮದುವೆಗೂ ಮೊದಲು ಮತಗಟ್ಟೆಗೆ ವಧು ದಿಬ್ಬಣದಲ್ಲೇ ಆಗಮಿಸಿ ಮತ ಚಲಾಯಿಸಿರುವ ಘಟನೆ ಬಂದಾರಿನಲ್ಲಿ ನಡೆದಿದೆ.

ಬಂದಾರು ಗುತ್ತು ಮನೆ ದಿ.ನೇಮಣ್ಣ ಗೌಡರ ಪುತ್ರಿ ಡಾ.ಸೌಮ್ಯಾ ಮದುವೆಯ ನಡುವೆಯೂ ಮತದಾನ ಮಾಡಿದವರು.

ಅವರ ಮದುವೆ ವಿಟ್ಲದ ಹರೀಶ್ ಅವರೊಂದಿಗೆ ನಿಗದಿಯಾಗಿದ್ದು, ವಧು ಸೌಮ್ಯಾ ಬೆಳಗ್ಗೆ ತನ್ನ ಬಂದಾರಿನ ಮನೆಯಿಂದ ದಿಬ್ಬಣದಲ್ಲೇ ಬಂದಾರಿನ ಮತಗಟ್ಟೆಗೆ (ಸಂಖ್ಯೆ 219) ಆಗಮಿಸಿ, ಹಕ್ಕು ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.

LEAVE A REPLY

Please enter your comment!
Please enter your name here