ಶಿಶಿಲ: ಶಿವಕೀರ್ತಿ ನಿಲಯದಲ್ಲಿ ಹನುಮ ಜಯಂತಿ ಆಚರಣೆ

0

ಶಿಶಿಲ: ಭೂಮಿಯಲ್ಲಿ ಚಿರಕಾಲ ಇದ್ದಾರೆ.ಎಲ್ಲಿ ಭಕ್ತಿಯಿಂದ ಭಜಿಸುವವರಿರುತ್ತಾರೊ ಅಲ್ಲಿ ರಾಮ ಹನುಮನಿರುತ್ತಾರೆ. ಭಜನೆ ಸಂಸ್ಕಾರ ಬೆಳೆಸುತ್ತದೆ. ಅಳುಕನ್ನು ದೂರ ಮಾಡುತ್ತದೆ.

ನಮ್ಮ ಧರ್ಮ ನಂಬಿಕೆ ಇರುವಲ್ಲಿ ಹನುಮ ರಾಮನಿರುತ್ತಾರೆ. ನಾವು ಇರುವಲ್ಲಿಯವರೆಗೆ ಅವರೂ ಇರುತ್ತಾರೆ. ಅವರು ಇರುವಲ್ಲಿಯವರೆಗೆ ನಾವೂ ಇರುತ್ತೆವೆ. ಎಂದು ಸಾಹಿತಿ, ಬರಹಗಾರ, ನಿವ್ರತ್ತ ಪ್ರಾಂಶುಪಾಲರಾದ ಉಂಡೆಮನೆ ವಿಶ್ವೆಶ್ವರ ಭಟ್ ತಿಳಿಸಿದರು.

ಅವರು ಶಿಶಿಲ ಶಿವಕೀರ್ತಿ ನಿಲಯದಲ್ಲಿ‌ ನಡೆದ “ಹನುಮ‌ ಜಯಂತಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.

ಕಾರ್ಯಕ್ರಮವನ್ನು ಅರಿಕೆಗುಡ್ದೆ ದೇವಾಲಯದ ಪ್ರಕಾಶ ಪಿಲಿಕಬೆ ಉದ್ಘಾಟನೆ ಮಾಡಿ ಹನುಮಂತ ರಾಮಾಯಣದ ರತ್ನ, ಭಕ್ತಿಗೆ ಮತ್ತು ಆದರ್ಶಕ್ಕೆ ಹನೂಮ ನಮಗೆಲ್ಲಾ ಮಾದರಿ.ಹನುಮನ ಭಜಿಸಿದವರಿಗೆ ಎಲ್ಲಾ ಪುಣ್ಯ ಕಾರ್ಯಗಳೂ ಜೀವನದಲ್ಲಿ ಲಭಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಯಿಂದ ಕುಣಿತ ಭಜನೆ, ಭಜನಾ ಪಟುಗಳಿಗೆ ಅಭಿನಂದನೆ, ರಾಮಾಯಣ ಹಕ್ಕಿ ನೋಟ ಪುಸ್ತಕ ವಿತರಣೆ ಮುಂತಾದ ಕಾರ್ಯಕ್ರಮ ಜರಗಿತ್ತು.ಭಜನಾ ಕಾರ್ಯಕ್ರಮವನ್ನು ಸುಂದರ ಬಿಳಿನೆಲೆ ಮತ್ತು ತಂಡದವರು ನಿರ್ವಹಿಸಿದ್ದರು.

ವಿವಿಧ ಕಾರ್ಯಕ್ರಮದಲ್ಲಿ ರಾಘವೇಂದ್ರ ಕಿಗ್ಗ, ಉದಯಶಂಕರ ಅರಸಿನಮಕ್ಕಿ, ಪುತ್ತೂರು ರವೀಂದ್ರ ಕುದ್ದಣ್ನಾಯ, ಭಾಸ್ಕರ ರಾವ್ ಮುಂಡ್ರುಪ್ಪಾಡಿ, ರವಿ ಕಾಸರಗೋಡು, ವಿಶು ಕುಮಾರ್ ಪೆರೆಡೆಲು, ಪ್ರೇಮಚಂದ್ರ ಪೆರ್ಲ, ಮೋಹನ ನೆಲ್ಲಿತ್ತಾಯ, ಶಿವರಾಮ ನೆಲ್ಲಿತ್ತಾಯ, ಶ್ರೀಪತಿ ಶಿಶಿಲ, ಪ್ರಕಾಶ ನೆಲ್ಲಿತ್ತಾಯ ಮುಂತಾದವರು ಭಾಗವಹಿಸಿದ್ದರು.

p>

LEAVE A REPLY

Please enter your comment!
Please enter your name here