ಬೆಳ್ತಂಗಡಿ : ಗೇರುಕಟ್ಟೆ ಕಳಿಯ ಗ್ರಾಮದ ಕೊರಂಜ ಸರಕಾರಿ ಶಾಲಾ ಮುಂಭಾಗದಲ್ಲಿ ಚರಂಡಿ ಮುಚ್ಚಿದ ಪರಿಣಾಮವಾಗಿ ಮನೆಯೊಳಗೆ ನೀರು ತುಂಬಿದ ಘಟನೆ ಎ.20ರಂದು ನಡೆಯಿತು.
ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಂಜ ಸ.ಹಿ.ಪ್ರಾ.ಶಾಲೆ ಮುಂಭಾಗದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ರಸ್ತೆಯ ಚರಂಡಿ ಮುಚ್ಚಿದ ಪರಿಣಾಮವಾಗಿ ರಸ್ತೆ ಬದಿ ಚರಂಡಿ ನೀರು ಹಾಗೂ ಪ್ಲಾಸ್ಟಿಕ್, ಕಸ,ಕಡ್ಡಿ ಮನೆಯೊಳಗೆ ನುಗ್ಗಿ ಮನೆಯವರಿಗೆ ತೊಂದರೆ ಆಗಿದೆ.
ವಿಷಯ ತಿಳಿದು ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮೆದಿನ ಸ್ಥಳಕ್ಕೆ ಭೇಟಿ ತಕ್ಷಣ ಸಮಸ್ಯೆಯನ್ನು ಸರಿಪಡಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಕಳೆದ ಸುಮಾರು 5 – 6 ವರ್ಷಗಳಿಂದ ಈ ರೀತಿಯ ತೊಂದರೆಗಳನ್ನು ಸ್ಥಳೀಯರು ಅನುಭವಿಸುತ್ತಿದ್ದಾರೆ.
ಗುರುವಾಯನಕರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿ ರಸ್ತೆಯ ಪಕ್ಕದಲ್ಲಿ ಚರಂಡಿ ನಿರ್ಮಾಣದ ಅವ್ಯವಸ್ಥೆಯಿಂದ ಮತ್ತು ಸಂಬಂಧಿಸಿದ ಇಲಾಖೆಯ ನಿರ್ಲಕ್ಷ್ಯ ಕಾರಣವೆಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಮಳೆಗಾಲದಲ್ಲಿ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಸಾರ್ವಜನಿಕ ನಡೆದಾಡಲು ತುಂಬಾ ತೊಂದರೆ ಆಗುತ್ತದೆ.
ರಸ್ತೆ ಬದಿಯ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆಯನ್ನು ಮಾಡದೇ ಇದ್ದಲ್ಲಿ ರಸ್ತೆ ತಡೆ ಮಾಡುವ ನಿರ್ಧಾರಕ್ಕೆ ಮುಂದಾಗಿದ್ದಾರೆ.