ಕುವೆಟ್ಟು: ಮದ್ದಡ್ಕ ಪೇಟೆಯ ಮಧ್ಯಬಾಗದಲ್ಲಿ ಎ.20ರಂದು ಚರಂಡಿಯಲ್ಲಿ ಬಾಕಿಯಾದ ಗ್ಯಾಸ್ ಸರಬರಾಜು ಮಾಡುವ ಪಿಕಪ್.
ಸ್ಥಳೀಯ ಸಹಕಾರದಲ್ಲಿ ಮೇಲೆತ್ತಲಾಯಿತು.ರಸ್ತೆ ಅಗಲೀಕರ ಕಾಮಗಾರಿ ಕೆಲವು ತಿಂಗಳುಗಳ ಹಿಂದೆ ಚರಂಡಿಯ ಕೆಲಸ ನಡೆಯದೆ ಅರ್ಧದಲ್ಲಿ ಸ್ಥಗಿತಗೊಳಿಸಿದ ಕಾರಣ ಜನ ಸಾಮಾನ್ಯರು ಅಂಗಡಿ ವ್ಯಾಪಾರಸ್ತರು ಕಷ್ಟವನ್ನು ಅನುಭವಿಸುತ್ತಿದ್ದರು.
ಈಗ ಮಳೆ ಪ್ರಾರಂಭವಾದ ಕಾರಣ ಅಗೆದ ಚರಂಡಿಗೆ ಮಣ್ಣು ತುಂಬಿಸಿದ್ದು ಮಳೆ ಬಂದ ಸಂದರ್ಭದಲ್ಲಿ ಚರಂಡಿಯ ಅರಿವಾಗದೆ ವಾಹನ ಚಾಲಕರು ಬಂದು ಚರಂಡಿಯಲ್ಲಿ ಬಾಕಿಯಾದ ಘಟನೆ ನಡೆದಿದೆ.
ಚರಂಡಿ ನಿರ್ಮಾಣದ ಸಮಯದಲ್ಲಿ ಹಾಕಲಾದ ಕಬ್ಬಿನದ ರಾಡ್ ತೆಗೆಯದೆ ವಾಹನದ ಟಯರ್ ಗಳಿಗೆ ತಾಗಿ ಕೆಲವು ಗಾಡಿಗಳು ಪಂಚರ್ ಆದ ಘಟನೆಯು ನಡೆದಿದೆ.
p>