ಹತ್ಯಡ್ಕ: ಅರಿಕೆಗುಡ್ದೆಯಲ್ಲಿ ದೇವಿಗೆ ದೃಢಕಲಶ, ವನ ದುರ್ಗಾ‌ಹೊಮ, ಅಭಿನಂದನಾ ಸಭೆ- ಪ್ರಾಮಾಣಿಕ ಮುಗ್ದ ಭಕ್ತಿಯಿಂದ ಉತ್ತಮ ಫಲಿತಾಂಶ: ಪ್ರಕಾಶ್ ಪಿಲಿಕಬೆ

0

ಹತ್ಯಡ್ಕ: ಉತ್ತಮ ಪ್ರಮಾಣಿಕ ಭಕ್ತಿಯಿಂದ ಸಮಾಜದಲ್ಲಿ ಪುಣ್ಯ ಕಾರ್ಯಗಳು ನೆರೆವೆರುತ್ತದೆ.ಅದಕ್ಕೆ ಮಾದರಿ ನಮ್ಮ ಅರಿಕೆಗುಡ್ದೆ ಪುಣ್ಯಕ್ಷೇತ್ರ.ಸಾವಿರಾರು ಮಂದಿ ಕಾರ್ಯಕರ್ತರ ಅವಿರತ ಶ್ರಮಕ್ಕೆ ಅಭಿನಂದನೆ, ಈ ದೇವಾಲಯದಲ್ಲಿ ಮುಂದೆಯೂ ಸಮಾಜ ಮುಖಿ ಕಾರ್ಯವನ್ನು ಮುಂದುವರಿಸುತ್ತೇವೆ. ಅಲ್ಲದೆ ಅನ್ನದಾನ ಕಾರ್ಯ ಪ್ರಾರಭಿಸುತ್ತೇವೆ. ಸಂಪ್ರದಾಯದಂತೆ ಎಲ್ಲಾ ಪುಣ್ಯ ಕಾರ್ಯವನ್ನು ಇಲ್ಲಿ ನಡೆಸುತ್ತೇವೆ ಎಂದು ಹತ್ಯಡ್ಕ ಗ್ರಾಮದ ಅರಿಕೆಗುಡ್ದೆ ಪುಣ್ಯಕ್ಷೇತ್ರದ ದೇವಾಲಯದ ಅಧ್ಯಕ್ಷ ಪಿಲಿಕಬೆ ಪ್ರಕಾಶ್ ಅವರು ಕಾರ್ಯಕರ್ತರಿಗೆ ಅಭಿನಂದನಾ ಮಾತು ನುಡಿದರು.

ಅರಿಕೆಗುಡ್ದೆಯಲ್ಲಿ ದೇವಿಗೆ ದೃಢಕಲಶ, ವನ ದುರ್ಗಾ‌ಹೊಮ, ಅಭಿನಂದನಾ ಸಭೆ, ಭಜನೋತ್ಸವ, ಅನ್ನ ಸಂತರ್ಪಣೆ ಮುಂತಾದ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದಲ್ಲಿ ಬ್ರಹ್ಮ‌ಕಲಶ ಅಧ್ಯಕ್ಷ ರಂಗ ದಾಮಲೆ, ಶ್ರೀಕರ ರಾವ್, ಸಂಚಾಲಕ ಜಯರಾಮ ನೆಲ್ಲಿತ್ತಾಯ, ಚಂದ್ರ ಶೇಖರ ಸಾಲ್ಯಾನ್, ದೇವಾಲಯದ ಅರ್ಚಕರು ಮುಂತಾದವರು ಭಾಗವಹಿಸಿ ಅಭಿನಂದನಾ ಭಾಷಣ ಮಾಡಿದರು.

ನಂತರ ಶ್ರೀ ಕಡಬ ಸುಂದರ ಅವರ ತಂಡದವರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ಜರಗಿದ್ದು ತಾಲೂಕಿನ ವಿವಿಧ ತಂಡಗಳು ಭಾಗವಹಿಸಿದ್ದರು.

ಮುರಳೀಧರ ಸ್ವಾಗತಿಸಿ, ರೇಣುಕಾ ಸುಧೀರ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here