ಮುಂಡಾಜೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಆರ್ಥಿಕ ವರ್ಷ 2023-24ನೇ ಸಾಲಿನಲ್ಲಿ ಸದಸ್ಯರ ಸಾಲ ಮರುಪಾವತಿಯಲ್ಲಿ ಶೇಕಡಾ ನೂರರ ಸಾಧನೆ ಮಾಡಿರುತ್ತದೆ.
ಕಳೆದ 11 ವರ್ಷಗಳಿಂದ ಸತತವಾಗಿ ಈ ಸಾಧನೆ ಮಾಡಿದ್ದು, ಪ್ರಸಕ್ತ ವರ್ಷವೂ ಈ ಸಾಧನಾ ಪಥವನ್ನು ಮುಂದುವರೆಸಿದೆ.
ಸದ್ರಿ ವರ್ಷದಲ್ಲಿ ಸಂಘಕ್ಕೆ ಎರಡು ಕೋಟಿಗೂ ಅಧಿಕ ಲಾಭವನ್ನು ಅಂದಾಜಿಸಲಾಗಿದೆ.
ಈ ಸಾಧನೆಗೆ ಸಂಪೂರ್ಣವಾಗಿ ಸಹಕರಿಸಿದ ಸದಸ್ಯರಿಗೆ, ಎಲ್ಲಾ ಗ್ರಾಹಕರಿಗೂ, ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗಕ್ಕೂ ಹಾಗೂ ಮುಂಡಾಜೆ ಪ್ಯಾಕ್ಸ್ ನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಗೂ ಸಂಘದ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು.
p>