ಮಡಂತ್ಯಾರು: ಮಡಂತ್ಯಾರು ಶ್ರೀ ದುರ್ಗಾ ಕಾಂಪ್ಲೆಕ್ಸ್ (ಕಲಾ ಸಭಾಂಗಣ) ಇಲ್ಲಿ ಗ್ರೀನ್ ಪ್ಯಾಲೇಸ್ ಫ್ಯಾಮಿಲಿ ರೆಸ್ಟೋರೆಂಟ್, ಬೋರ್ಡಿಂಗ್ & ಲಾಡ್ಜಿಂಗ್ ಎ.12ರಂದು ಶುಭಾರಂಭಗೊಳ್ಳಲಾಯಿತು.
ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೋರಸ್ ಉದ್ಘಾಟನೆಯನ್ನು ನೆರವೇರಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಆಗಮಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪ್ರಶಾಂತ್ ಪೂಜಾರಿ ಅಧ್ಯಕ್ಷರು ಮದ್ಯ ಮಾರಾಟಗಾರರ ಸಂಘ ಬೆಳ್ತಂಗಡಿ, ಜಯಂತ್ ಶೆಟ್ಟಿ ಅಧ್ಯಕ್ಷರು ವರ್ತಕರ ಸಂಘ ಮಡಂತ್ಯಾರು, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್, ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ಎ.ಎಸ್, ಉಪಾಧ್ಯಕ್ಷ ಗೋಪಾಲಕೃಷ್ಣ ಕೆ., ಮಾಜಿ ಉಪಾಧ್ಯಕ್ಷೆ ಸಂಗೀತ ಶೆಟ್ಟಿ, ನೂತನ್ ಕ್ಲಾತ್ ಸೆಂಟರ್ ನ ಪ್ರಕಾಶ್ ರೊಡ್ರಿಗಸ್.
ಮೊದಲಾದವರು ಭಾಗವಹಿಸಿದ್ದರು.
ಎಂ. ತಿಮ್ಮಪ್ಪ ಗೌಡ ಮತ್ತು ಕಲಾವತಿ ತಿಮ್ಮಪ್ಪ ಗೌಡ ನೆಟ್ಟಣ, ಮಾಜಿ ತಾ. ಪಂಚಾಯತ್ ಸದಸ್ಯ ವಿನ್ಸೆಂಟ್ ಡಿಸೊಜಾ, ನಿವೃತ್ತ ಆರ್ಮಿ ನೆಲ್ಸನ್, ಕುಟುಂಬಸ್ಥರು ಉಪಸ್ಥಿತರಿದ್ದರು.ಹಿತೇಶ್ ಸ್ವಾಗತಿಸಿದರು.ವಿನ್ಸೆಂಟ್ ಮೊರಾಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬೆಳೆಯುತ್ತಿರುವ ಮಡಂತ್ಯಾರಿಗೆ ಹೊಸ ಗರಿ ಮೂಡಿದೆ.ಉತ್ತಮ ಊಟೋಪಚಾರಕ್ಕೆ ಬೇಕಾದ ವ್ಯವಸ್ಥೆ ಇಂದು ಜಾರಿ ಮಾಡಿದ ತಿಮ್ಮಪ್ಪ ಗೌಡರಿಗೆ ಅಭಿನಂದನೆ.ಹಳ್ಳಿ ಹಳ್ಳಿ ಬೆಳೆಯುತ್ತಿದೆ.ಇಲ್ಲಿಯ ಹತ್ತಿರದ ಪೇಟೆ ಮಡಂತ್ಯಾರು ಅವಲಂಬಿತರು.ಈಗ ಹಳ್ಳಿ ಹಳ್ಳಿ, ಗ್ರಾಮಗಳಲ್ಲಿ ವ್ಯವಹಾರ ಪ್ರಾರಂಭಿಸಿದ್ದಾರೆ.ಇಲ್ಲಿಗೆ ಬರುವುದು ಕೇವಲ ದೊಡ್ಡ ಸಂಸ್ಥೆ ನೂತನ್ ಕ್ಲೋತ್ ಸೆಂಟರ್ ಇಲ್ಲಿಗೆ ಬೇರೆ ಬೇರೆ ಊರಿನವರು ಆಗಮಿಸಿದ್ದಾರೆ.
ಆ ನೆಲೆಯಲ್ಲಿ ನೆಟ್ಟನೆಯಿಂದ ಇಲ್ಲಿಗೆ ಆಗಮಿಸಿ ಈ ಸಂಸ್ಥೆ ಕಟ್ಟಿ ಇಲ್ಲಿಯವರಿಗೆ ಸಹಕಾರಿಯಾಗಿದ್ದಾರೆ.ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಅಚ್ಚುಕಟ್ಟಾಗಿ ಇಲ್ಲಿ ಈ ಸಂಸ್ಥೆ ಪ್ರಾಂಭಿಸಿದ್ದಾರೆ.
ಏನೂ ಉದ್ಯಮ ಮಾಡುತ್ತಾರಾ ಅದು ಇಲ್ಲಿ ಬೆಳೆದಿದೆ. ಇಲ್ಲಿ ಹಾಲ್, ಹೊಟೇಲ್, ಎಲ್ಲಾ ಸೌಕರ್ಯದೊಂದಿಗೆ ಪ್ರಾರಂಭಿಸಿದ ಸಂಸ್ಥೆ ಯಶಸ್ವಿಯಾಗಲಿ ಎಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೋರಸ್ ಹೇಳಿದರು.
ವಿಶೇಷತೆಗಳು:
ಫ್ಯಾಮಿಲಿ ಬಾರ್ ಹಾಗೂ ರೆಸ್ಟೋರೆಂಟ್ (ವೆಜ್ & ನಾನ್ ವೆಜ್)
ವಿಸ್ತಾರ ಕೊಠಡಿಗಳು
ವಿಶಾಲವಾದ ಪಾರ್ಕಿಂಗ್ ಸೌಲಭ್ಯ
ಪಾರ್ಟಿ ಹಾಲ್